ಸ್ಪಾರ್ಟ್ಫೋನ್ ಬಳಕೆ ಹೆಚ್ಚಾಗಿದೆ. ಹಾಗೆ ಸ್ಮಾರ್ಟ್ಫೋನ್ ಮೂಲಕ ಹಣ ವರ್ಗಾವಣೆ ಪ್ರಕ್ರಿಯೆ ಕೂಡ ಹೆಚ್ಚಾಗಿದೆ. ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲು ಏಕೀಕೃತ ಪಾವತಿ ಯುಪಿಐ ಬಳಸಲಾಗುತ್ತದೆ. ಇದು ಅನೇಕ ಬ್ಯಾಂಕ್ ಖಾತೆಗಳಿಗೆ ಮೊಬೈಲ್ ಅಪ್ಲಿಕೇಶನ್ ಮೂಲಕ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಇದನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಇದರ ನಿಯಂತ್ರಣವನ್ನು ರಿಸರ್ವ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್‌ನ ಮಾಡುತ್ತದೆ.
ಸೆಪ್ಟೆಂಬರ್‌ನಲ್ಲಿ ಯುಪಿಐನ ವಹಿವಾಟು ದಾಖಲೆಯ ಮಟ್ಟ ತಲುಪಿತು. ಆರ್‌ಬಿಐ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ವಹಿವಾಟು 1.8 ಬಿಲಿಯನ್ ದಾಟಿದ್ದರೆ, ಅದರ ಮೌಲ್ಯವು 3 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಾಗಿದೆ.
ಯುಪಿಐ ನಿಧಿ ವರ್ಗಾವಣೆಯ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ವಹಿವಾಟು ವಿಫಲಗೊಳ್ಳಲು ಅನೇಕ ಕಾರಣವಿದೆ. ನಿಗದಿತ ಮಿತಿಯನ್ನು ಮೀರಿದರೆ ಇದು ವಿಫಲಗೊಳ್ಳುತ್ತದೆ. ಹೆಚ್ಚಿನ ಬ್ಯಾಂಕುಗಳು ಪ್ರತಿದಿನ 10 ವಹಿವಾಟುಗಳನ್ನು ಮಾತ್ರ ಅನುಮೋದಿಸುತ್ತವೆ. ಖಾತೆಯಲ್ಲಿ ಕಡಿಮೆ ಹಣವಿದ್ದರೂ ಸಹ ವ್ಯವಹಾರ ವಿಫಲಗೊಳ್ಳುತ್ತದೆ. ತಪ್ಪಾದ ಪಿನ್ ಕೂಡ ವಿಫಲಗೊಳ್ಳುತ್ತದೆ. ಹಣ ವರ್ಗಾವಣೆ ಮಾಡುವ ವಿವರಗಳನ್ನು ತಪ್ಪಾಗಿ ನಮೂದಿಸಿದರೆ ವರ್ಗಾವಣೆ ವಿಫಲಗೊಳ್ಳುತ್ತದೆ.
ಯುಪಿಐ ಹಣ ವರ್ಗಾವಣೆ ವೇಳೆ ಕೆಲವೊಮ್ಮೆ ಖಾತೆಯಿಂದ ಹಣ ಕಟ್ ಆಗಿರುತ್ತದೆ. ಆದ್ರೆ ಹಣ ವರ್ಗಾವಣೆಯಾಗಿರುವುದಿಲ್ಲ. ಇಂಥ ಸಂದರ್ಭದಲ್ಲಿ ಮೊದಲು Payment Historyಗೆ ಹೋಗಬೇಕು. Raise Dispute ಆಯ್ಕೆ ಮಾಡಬೇಕು. ಅಲ್ಲಿ ದೂರು ದಾಖಲಿಸಬೇಕು. ಯುಪಿಐ ಅಡಿಯಲ್ಲಿ ಹಣ ವರ್ಗಾವಣೆ ಈಗ ಸಾಮಾನ್ಯವಾಗಿದೆ. ಇದ್ರ ಮೂಲಕ ಯಾವುದೇ ಸಮಯದಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ.