ಯುಪಿಐ, ಪೇಟಿಎಂ, ನೆಟ್ ಬ್ಯಾಂಕಿಂಗ್ನಂಥ ಪೇಮೆಂಟ್ ವ್ಯವಸ್ಥೆಗಳ ಕಾರಣದಿಂದ ಆನ್ಲೈನ್ ಹಣ ವರ್ಗಾವಣೆಯು ಬಹಳ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಹೀಗಾಗಿ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ಮೊದಲಿನಷ್ಟು ಹೊರೆ ಇಲ್ಲದಂತಾಗಿದೆ.
ಆದರೆ ಈ ಎಲ್ಲಾ ಸುಧಾರಣೆಗಳಿಂದ ಅನುಕೂಲ ಇರುವಷ್ಟೇ ಅನಾನುಕೂಲತೆಗಳೂ ಇವೆ ಎಂಬುದು. ಅದರಲ್ಲೂ ಸಾಂಕ್ರಮಿಕದ ಲಾಕ್ಡೌನ್ ಅವಧಿಯಲ್ಲಿ ಸಾಕಷ್ಟು ಹಗರಣಗಳು ಆನ್ಲೈನ್ ವ್ಯವಹಾರಗಳ ಮುಖಾಂತರ ನಡೆಯುತ್ತಿವೆ.
ಉದಾಹರಣೆಗೆ: ಯಾರಾದರೂ ಒಬ್ಬರು ತಪ್ಪು ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ ಮಾಡಿದ್ದಲ್ಲಿ, ಈ ವ್ಯವಹಾರವನ್ನು ಹಿಂದಿರುಗಿಸಲು ಫಲಾನುಭವಿಗಳ ಅನುಮತಿ ಇಲ್ಲದೇ ಬ್ಯಾಂಕುಗಳಿಗೆ ಸಾಧ್ಯವಾಗದು.
ಆದರೆ ಈಗ ಇಂಥ ಪರಿಸ್ಥಿತಿಗಳನ್ನು ಸರಿಪಡಿಸಬಹುದಾಗಿದೆ. ತಪ್ಪಾಗಿ ಹಣ ವರ್ಗಾವಣೆಯಾದ ಕೂಡಲೇ ಆ ವ್ಯಕ್ತಿಯು ಸಂಬಂಧಪಟ್ಟ ಬ್ಯಾಂಕಿನ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಬಹುದಾಗಿದೆ. ಹಣ ಕಳುಹಿಸುವ ಖಾತೆ, ಫಲಾನುಭವಿಯ ಖಾತೆ, ವ್ಯವಹಾರದ ದಿನಾಂಕ ಹಾಗೂ ಸಮಯವನ್ನು ಸರಿಯಾಗಿ ತಿಳಿಸುವ ಮೂಲಕ ಎಕ್ಸಿಕ್ಯೂಟಿವ್ ಮುಖಾಂತರ ಎಕ್ಸಿಕ್ಯೂಟಿವ್ ಮೂಲಕ ಈ ವ್ಯವಹಾರವನ್ನು ಹಿಂದಿರುಗಿಸಬಹುದಾಗಿದೆ. ಇದಕ್ಕಾಗಿ 5-6 ವ್ಯಾವಹಾರಿಕ ದಿನಗಳು ಹಿಡಿಯಲಿದ್ದು, ನೀವು ವರ್ಗಾವಣೆ ಮಾಡಿದ ಖಾತೆ ಚಾಲ್ತಿಯಲ್ಲಿದ್ದಲ್ಲಿ ನಿಮ್ಮ ಹಣ ತನ್ನಿಂತಾನೇ ಹಿಂದಿರುಗಲಿದೆ.
ನೀವು ದುಡ್ಡು ಕಳುಹಿಸಿದ ಸಂಖ್ಯೆಯ ಖಾತೆ ಚಾಲ್ತಿಯಲ್ಲಿ ಇದ್ದ ವೇಳೆ, ಆ ಬ್ಯಾಂಕಿನ ಮ್ಯಾನೇಜರ್ ಜೊತೆಗೆ ಮಾತನಾಡಿ ವ್ಯಾವಹಾರಿಕ ಲೋಪದ ಬಗ್ಗೆ ಮನದಟ್ಟು ಮಾಡಬಹುದಾಗಿದೆ. ಫಲಾನುಭವಿಯ ಖಾತೆಯ ಮಾಹಿತಿಯನ್ನು ಪರಿಶೀಲಿಸಿದ ಬಳಿಕ, ನಿಮ್ಮ ದುಡ್ಡನ್ನು ಹಿಂದಿರುಗಿಸಲು ಬ್ಯಾಂಕ್ ವ್ಯವಸ್ಥೆ ಮಾಡಬಹುದು.