ಆಪಲ್ ವಾಚುಗಳ ಸೀರೀಸ್ 2 ಹಾಗೂ ಅದರಾಚೆಯ ಮಾಡೆಲ್‌ಗಳು ವಾಟರ್‌ಪ್ರೂಫ್ ಆಗಿದ್ದು, ಇವುಗಳನ್ನು ಈಜುವಾಗಲೂ, ಸ್ನಾನ ಮಾಡುವಾಗಲೂ ಧರಿಸಬಹುದಾಗಿದೆ.
ಈ ವಾಚುಗಳ ಸ್ಪೀಕರ್‌ಗಳು ಒಳಬಂದ ನೀರನ್ನು ಹೊರಚಿಮ್ಮಿಸುವ ಮೂಲಕ ಆಂತರಿಕ ಬಿಡಿಭಾಗಗಳನ್ನು ರಕ್ಷಿಸುವ ಕೆಲಸವನ್ನು ಮಾಡುತ್ತವೆ. ವಾಚ್‌ನಿಂದ ಹೊರಗೆ ನೀರು ಹೇಗೆಲ್ಲಾ ಚಿಮ್ಮುತ್ತದೆ ಎಂದು The Slow Mo Guys ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ ಒಂದರ ಈ ವಿಡಿಯೋ ನಿಮಗೆ ತೋರುತ್ತದೆ.
ವಿಜ್ಞಾನ ಹಾಗೂ ತಂತ್ರಜ್ಞಾನದ ಆವಿಷ್ಕಾರಗಳು ಹೇಗೆಲ್ಲಾ ಆಗಿವೆ ಎಂಬುದನ್ನು ಸ್ಲೋ ಮೋಷನ್ ವಿಡಿಯೋಗಳ ಮೂಲಕ ಈ ಚಾನೆಲ್ ಬಹಳ ಚೆನ್ನಾಗಿ ವಿವರಿಸುತ್ತದೆ.