ವಿಮಾನವಾಗಿ ಪರಿವರ್ತನೆಯಾಗಬಲ್ಲ ಸಾಮರ್ಥ್ಯವುಳ್ಳ ಕಾರು ಸ್ಲೋವಾಕಿಯಾದಲ್ಲಿ 1500 ಅಡಿ ಎತ್ತರದಲ್ಲಿ ಹಾರಾಟ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಲೋವಾಕಿಯಾ ಕ್ಲೈನ್ ವಿಷನ್ ಎಂಬ ಸಂಸ್ಥೆ ಈ ವಿನೂತನ ಕಾರನ್ನ ವಿನ್ಯಾಸಗೊಳಿಸಿದ್ದು ಇದಕ್ಕೆ ಏರ್ ಕಾರ್ ಅಂತಾ ನಾಮಕರಣ ಮಾಡಿದೆ. ಈ ಕಾರಿನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ ಕಾರು ವಿಮಾನ ರೂಪದಲ್ಲಿ ಮಾರ್ಪಾಡಾಗೋದನ್ನ ನೋಡಬಹುದಾಗಿದೆ.
ಫ್ರೊಫೆಸರ್ ಸ್ಟೀಫನ್ ಕ್ಲೈನ್ ವಿನ್ಯಾಸಗೊಳಿಸಿದ ಐದನೇ ತಲೆಮಾರಿನ ಫ್ಲೈಯಿಂಗ್ ಕಾರು ಇದಾಗಿದ್ದು ಇದನ್ನ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ವಿಮಾನದ ಮಾದರಿಯಲ್ಲೇ ಟೇಕಾಫ್ ಹಾಗೂ ಲ್ಯಾಂಡಿಂಗ್ಗಳನ್ನ ಈ ಏರ್ ಕಾರು ಮಾಡುತ್ತದೆ. ಎರಡು ಆಸನಗಳನ್ನ ಹೊಂದಿರುವ ಈ ಕಾರು 1100 ಕೆಜಿ ತೂಕ ಹೊಂದಿದೆ.