ನವದೆಹಲಿ: ಟಿವಿ, ಫ್ರಿಜ್, ವಾಷಿಂಗ್ ಮಷಿನ್, ಏರ್ ಕಂಡೀಷನರ್ ಮೊದಲಾದ ಗೃಹಪಯೋಗಿ ವಸ್ತುಗಳನ್ನು ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.
ಶೀಘ್ರವೇ ಟಿವಿ, ಫ್ರಿಜ್, ವಾಷಿಂಗ್ ಮಷಿನ್ ಮೊದಲಾದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದು ಒಳ್ಳೆಯದು. ಈ ವಸ್ತುಗಳ ಬೆಲೆಯಲ್ಲಿ ಶೀಘ್ರವೇ ಶೇಕಡ 20 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಶ್ವದಲ್ಲಿ ಟಿವಿ ಪ್ಯಾನೆಲ್ ಗಳ ಕೊರತೆ ಉಂಟಾಗಿದೆ. ಈ ಕಾರಣದಿಂದ ಟಿವಿಗಳ ದರ ಶೇಕಡ 30 ರಿಂದ ಶೇಕಡ 100 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇನ್ಪುಟ್ ಮೆಟೀರಿಯಲ್ ಕಾಸ್ಟ್ ವೆಚ್ಚದಲ್ಲಿ ಏರಿಕೆಯಾಗಿರುವುದರಿಂದ ಒಂದೇ ಬಾರಿಗೆ ದರ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.
ಇವುಗಳೊಂದಿಗೆ ಸತು, ಅಲ್ಯುಮಿನಿಯಂ, ಪ್ಲಾಸ್ಟಿಕ್ ಮೊದಲಾದ ವಸ್ತುಗಳ ದರ ಹೆಚ್ಚಾಗಲಿದೆ. ಹಡಗಿನ ಮೂಲಕ ಸರಕು ಸಾಗಣೆ ವೆಚ್ಚ ಶೇಕಡ 50ರಷ್ಟು ಜಾಸ್ತಿಯಾಗಿದೆ. ಈ ಕಾರಣದಿಂದ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಬಹುದು ಎನ್ನಲಾಗಿದೆ.