
ವಾಷಿಂಗ್ಟನ್: ಫೇಸ್ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನು ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಹಿಂದಿಕ್ಕಿದ್ದಾರೆ.
ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರ ಸಂಪತ್ತು ಈ ವರ್ಷ 2.4 ಶತಕೋಟಿ ಡಾಲರ್ ಏರಿಕೆಯಾಗಿದೆ. ಇದರೊಂದಿಗೆ ಅವರ ಸಂಪತ್ತು 111 ಶತಕೋಟಿ ಡಾಲರ್ ಗೆ ಏರಿಕೆಯಾಗಿದ್ದು, ಜುಕರ್ ಬರ್ಗ್ ಅವರನ್ನು ಹಿಂದಿಕ್ಕಿದ್ದಾರೆ.
ತಂತ್ರಜ್ಞಾನ ಆಧಾರಿತ ಕಂಪನಿಗಳ ಷೇರು ದರ ಕುಸಿತವಾಗಿದ್ದು, ಇದರ ಪರಿಣಾಮ ಸಿಲಿಕಾನ್ ವ್ಯಾಲಿ ಉದ್ಯಮಿಗಳ 50 ಶತಕೋಟಿ ಡಾಲರ್ ಸಂಪತ್ತು ಕರಗಿದೆ. ಎಲಾನ್ ಮಸ್ಕ್ ಅವರ ಸಂಪತ್ತಿನಲ್ಲಿ 25.8 ಶತಕೋಟಿ ಡಾಲರ್ ಇಳಿಕೆಯಾಗಿದ್ದು, ಜುಕರ್ಬರ್ಗ್ ಸಂಪತ್ತಿನಲ್ಲಿ ಶೇಕಡಾ 12ರಷ್ಟು ಇಳಿಕೆಯಾಗಿದೆ.
ಷೇರು ಮಾರುಕಟ್ಟೆ ಸೂಚ್ಯಂಕ ಕುಸಿಯುತ್ತಿವೆ. ಫೆಡರಲ್ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಬಿಗಿಗೊಳಿಸುತ್ತದೆ. ಇದರ ಪರಿಣಾಮ ಶ್ರೀಮಂತ ಉದ್ಯಮಿಗಳಿಗೆ ನಷ್ಟವಾಗುತ್ತಿದೆ.