ನವದೆಹಲಿ: ರಷ್ಯಾ, ಉಕ್ರೇನ್ ಯುದ್ಧದ ಪರಿಣಾಮ ಕಚ್ಚಾ ತೈಲ ದರ ಏರಿಕೆ ಕಂಡಿದೆ. ಯುದ್ಧದ ಪರಿಣಾಮ ಜನಸಾಮಾನ್ಯರ ಮೇಲೆಯೂ ಉಂಟಾಗತೊಡಗಿದ್ದು, ಗೋಧಿ ಮತ್ತು ಸೂರ್ಯಕಾಂತಿ ಎಣ್ಣೆ ದರ ಏರಿಕೆ ಕಂಡಿದೆ.
ಪಾಮ್ ಆಯಿಲ್, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಅಡುಗೆ ಎಣ್ಣೆ ದರ ಲೀಟರ್ ಗೆ 10 -20 ರೂ. ನಷ್ಟು ಏರಿಕೆ ಕಂಡಿದ್ದು, ಇದರೊಂದಿಗೆ ಕೆಲವು ಅಗತ್ಯ ವಸ್ತುಗಳ ದರ ದಿಢೀರ್ ಏರಿಕೆಯಾಗಿದೆ. ದಿಢೀರ್ ದರ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎನ್ನಲಾಗಿದೆ.