ಬ್ಯಾಂಕ್ ಖಾತೆ ತೆರೆಯಲು ವಯಸ್ಸಿನ ನಿರ್ಬಂಧವೇನೂ ಇಲ್ಲ ಎಂದು ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಎಸ್ಬಿಐ ತೋರುತ್ತಿದೆ. ಮಕ್ಕಳಿಗೆಂದೇ ವಿಶೇಷವಾದ ಉಳಿತಾಯ ಖಾತೆಯ ಆಯ್ಕೆಗಳನ್ನು ಎಸ್ಬಿಐ ತಂದಿದೆ.
’ಪೆಹಲಾ ಕದಮ್’ ಹಾಗೂ ’ಪಹ್ಲೀ ಉಡಾನ್’ ಹೆಸರಿನಲ್ಲಿ ತೆರೆಯಬಹುದಾದ ಈ ಉಳಿತಾಯ ಖಾತೆಯಲ್ಲಿ ಕನಿಷ್ಠ ಬಾಕಿಯನ್ನು ಕಾಯ್ದುಕೊಳ್ಳುವ ಅಗತ್ಯವಿಲ್ಲ. ಆದರೆ ಪ್ರತಿನಿತ್ಯ ಖಾತೆಯಲ್ಲಿರುವ ದುಡ್ಡು ಖರ್ಚು ಮಾಡಲು ಮಿತಿ ನಿಗದಿ ಮಾಡಲಾಗಿದೆ.
ಪೆಹಲಾ ಕದಮ್ ಖಾತೆ ತೆರೆಯಲು ಕನಿಷ್ಠ ವಯಸ್ಸಿನ ಮಿತಿ ಇಲ್ಲ. ಪೋಷಕರು/ಹೆತ್ತವರೊಂದಿಗೆ ಜಂಟಿಯಾಗಿ ಈ ಖಾತೆ ತೆರೆಯಬಹುದಾಗಿದೆ. ಆದರೂ ಸಹ ಈ ಖಾತೆಯನ್ನು ಮಕ್ಕಳ ಹೆಸರಿನಲ್ಲಿ ತೆರೆಯಬೇಕಾಗುತ್ತದೆ.
ಪೆಹಲಾ ಉಡಾನ್ ಖಾತೆಯಡಿ ಗರಿಷ್ಠ 10 ಲಕ್ಷ ರೂ.ಗಳವರೆಗೂ ಉಳಿತಾಯ ಮಾಡುವ ಅವಕಾಶವಿದೆ. ಈ ಖಾತೆಗೆ ಹತ್ತು ಹಾಳೆಗಳಿರುವ ವೈಯಕ್ತಿಗೆ ಚೆಕ್ ಬುಕ್ ಅನ್ನು ಸಹ ಮಕ್ಕಳಿಗೆ ಎಸ್ಬಿಐ ವಿತರಣೆ ಮಾಡಲಿದೆ. ಈ ಚೆಕ್ಗಳಿಗೆ ಮಕ್ಕಳು ಖುದ್ದು ತಾವೇ ಸಹಿ ಹಾಕಬಹುದಾಗಿದೆ.