ಬಹು ದಿನಗಳ ಬಳಿಕ ಗುರುವಾರದಂದು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಕಂಡಿದೆ. ಕಳೆದ 15 ದಿನಗಳಿಂದ ಒಂದೇ ರೀತಿಯ ದರವನ್ನ ಕಾಯ್ದುಕೊಂಡಿದ್ದ ತೈಲೋತ್ಪನ್ನಗಳು ಇಂದು ಇಳಿಕೆ ಕಂಡಿದೆ.
ನೀವು ಕೂಡ ನಿಮ್ಮ ಇಂಧನ ಟ್ಯಾಂಕ್ನ್ನು ಫಿಲ್ ಮಾಡಬೇಕು ಅಂತಾ ಅಂದುಕೊಂಡಿದ್ರೆ ನೀವು ಮನೆಯಲ್ಲೇ ಕೂತು ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನ ಕಂಡುಹಿಡಿಯಬಹುದಾಗಿದೆ.
ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ. ನಿಮ್ಮ ಮೊಬೈಲ್ನಿಂದ RSP <space> ಡೀಲರ್ ಕೋಡ್ನ್ನು ನಮೂದಿಸಿ ಟೈಪ್ ಮಾಡಿ 92249 92249 ಸಂಖ್ಯೆಗೆ ಕಳುಹಿಸಿ. ಪೆಟ್ರೋಲ್ ಪಂಪ್ನ ಡೀಲರ್ ಕೋಡ್ನ್ನು ನೀವು IOCL ವೆಬ್ಸೈಟ್ನಿಂದ ಪಡೆಯಬಹುದಾಗಿದೆ.