alex Certify ಮನೆಯಲ್ಲೇ ಕುಳಿತು ಪಿಎಫ್ ಬ್ಯಾಲೆನ್ಸ್‌ ತಿಳಿದುಕೊಳ್ಳುವುದು ಹೇಗೆ…? ಇಲ್ಲಿದೆ ಸಂಪೂರ್ಣ‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ಪಿಎಫ್ ಬ್ಯಾಲೆನ್ಸ್‌ ತಿಳಿದುಕೊಳ್ಳುವುದು ಹೇಗೆ…? ಇಲ್ಲಿದೆ ಸಂಪೂರ್ಣ‌ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುವ ಅಸ್ತ್ರಗಳಲ್ಲಿ ಒಂದಾಗಿದೆ. ಉದ್ಯೋಗಿ ಹಾಗೂ ಉದ್ಯೋಗದಾತರ ಪಾಲಿನ ಹಣವನ್ನ ಹೊಂದಿರುವ ಪಿಎಫ್​​ ಮೊತ್ತ ನಿವೃತ್ತಿ ಬಳಿಕ ಅಥವಾ ಹಣದ ಅವಶ್ಯಕತೆ ಇದ್ದ ಸಮಯದಲ್ಲಿ ಪಡೆಯಬಹುದಾಗಿದೆ.

ನಿಮ್ಮ ಇಪಿಎಫ್​ನಲ್ಲಿ ಎಷ್ಟು ಹಣವಿದೆ ಅನ್ನೋದನ್ನ ನೀವು ಇಪಿಎಫ್​ಒ ಕಚೇರಿಯಲ್ಲಿ ಗೊತ್ತು ಮಾಡಿಕೊಳ್ಳಬಹುದು ಹಾಗೂ ಇದನ್ನ ಹೊರತುಪಡಿಸಿ ಇನ್ನೂ ಹಲವು ಮಾರ್ಗಗಳಿವೆ. ಆದರೆ ಕೊರೊನಾ ಪ್ರಕರಣ ಅತಿಯಾಗ್ತಿರೋದ್ರಿಂದ ಸ್ಮಾರ್ಟ್​ ಮಾರ್ಗದ ಮೂಲಕವೇ ನೀವು ಪಿಎಫ್​ ಮೊತ್ತವನ್ನ ಕಂಡುಕೊಳ್ಳಬಹುದಾಗಿದೆ.

1. ಎಸ್​ಎಂಎಸ್​ ಮೂಲಕ : ಎಸ್​ಎಂಎಸ್​ ಮೂಲಕ ನೀವು ಇಪಿಎಫ್​ ಹಣವನ್ನ ಕಂಡುಹಿಡಿಯಬಹುದು. ಇದಕ್ಕಾಗಿ ನೀವು EPFOHO UAN LAN ನ್ನು ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಯಿಂದ 7738299899ಕ್ಕೆ ಕಳುಹಿಸಿ.

2. ಮಿಸ್ಡ್​ ಕಾಲ್​ ಮೂಲಕ : ನಿಮ್ಮ ನೋಂದಾಯಿತ ಮೊಬೈಲ್​ ಸಂಖ್ಯೆಯಿಂದ 011-22901406 ಮೊಬೈಲ್​ ನಂಬರ್​ಗೆ ಮಿಸ್ಡ್​ ಕಾಲ್​ ಕೊಡುವ ಮೂಲಕ ಬ್ಯಾಲೆನ್ಸ್ ಚೆಕ್​ ಮಾಡಬಹುದು.

3. ಆನ್​ಲೈನ್​ ಮೂಲಕ : ಇಪಿಎಫ್​ಒ ವೆಬ್​ಸೈಟ್​​​ ನಲ್ಲಿ ಲಾಗಿನ್​ ಆಗಿ ಬಳಿಕ ಡೌನ್​ಲೋಡ್​ ಪಾಸ್​ಬುಕ್​ ಆಯ್ಕೆ ಮೂಲಕ ಬ್ಯಾಲೆನ್ಸ್ ಚೆಕ್​ ಮಾಡಬಹುದು.

4. UMANG ಅಪ್ಲಿಕೇಶನ್​ ಮೂಲಕ : ಇಪಿಎಫ್​ಒನಲ್ಲಿ Employee centric services ಆಯ್ಕೆ ಕ್ಲಿಕ್ ಮಾಡಿ. ಇದರಲ್ಲಿ ವೀವ್​ ಪಾಸ್​ಬುಕ್​ ಕ್ಲಿಕ್​ ಮಾಡಿ. ಪಾಸ್​ಬುಕ್​ನ್ನು ನೋಡಲು ಯುಎಎನ್​ ಮೂಲಕ ಲಾಗಿನ್​ ಆಗಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...