ದೀರ್ಘಾವಧಿಯಲ್ಲಿ ಹೆಚ್ಚಿನ ಸ್ಥಿರ ಠೇವಣಿ ಬಯಸುವ ಯೋಚನೆಯಲ್ಲಿದ್ದರೆ ಬ್ಯಾಂಕ್ ಸ್ಥಿರ ಠೇವಣಿಗಿಂತ ಹೆಚ್ಚು ಲಾಭ ನೀಡುವ ಅಂಚೆ ಕಚೇರಿ ಸ್ಥಿರ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ. ಅಂಚೆ ಕಚೇರಿ ಉಳಿತಾಯ ಯೋಜನೆಗಳಲ್ಲಿ ಸರ್ಕಾರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದರಗಳನ್ನು ಬದಲಿಸುತ್ತದೆ.
ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಿರ ಠೇವಣಿ ಯೋಜನೆಗಳು 5-10 ವರ್ಷಗಳ ಅಧಿಕಾರಾವಧಿಗೆ ಶೇಕಡಾ 5.4 ರಷ್ಟು ಬಡ್ಡಿ ಪಾವತಿಸುತ್ತದೆ. ಇದಕ್ಕೆ ಹೋಲಿಸಿದರೆ ಅಂಚೆ ಕಚೇರಿ ಐದು ವರ್ಷಗಳ ಅವಧಿಯ ಠೇವಣಿ ಮೇಲೆ ಶೇಕಡಾ 6.7ರಷ್ಟು ಬಡ್ಡಿ ಸಿಗಲಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ 5 ವರ್ಷಗಳ ಅವಧಿಗೆ ಶೇಕಡಾ 6.8ರಷ್ಟು ಬಡ್ಡಿ ಸಿಗಲಿದೆ. ಕಿಸಾನ್ ವಿಕಾಸ್ ಪತ್ರದಲ್ಲಿ ನಿಮ್ಮ ಹಣ 124 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಇದಕ್ಕೆ ಶೇಕಡಾ 6.9ರಷ್ಟು ಬಡ್ಡಿ ಸಿಗುತ್ತದೆ. ಈ ಯೋಜನೆಗಳಲ್ಲಿ ಕನಿಷ್ಠ ಹೂಡಿಕೆ 1,000 ರೂಪಾಯಿ. ಗರಿಷ್ಠ ಮಿತಿಗೆ ಯಾವುದೇ ಮಿತಿಯಿಲ್ಲ. ಹಿರಿಯ ನಾಗರಿಕ ಉಳಿತಾಯ ಯೋಜನೆಗೆ ಶೇಕಡಾ 7.4ರಷ್ಟು ಸಿಗುತ್ತದೆ. ಬ್ಯಾಂಕ್ ಯೋಜನೆಗಿಂತ ಅಂಚೆ ಕಚೇರಿ ಯೋಜನೆ ಹೆಚ್ಚು ಸುರಕ್ಷಿತವಾಗಿದ್ದು, ಹೆಚ್ಚಿನ ಬಡ್ಡಿ ಸಿಗ್ತಿದೆ.