ಟೆಲಿಕಾಂ ಕಂಪನಿ ವೊಡಾಫೋನ್ – ಐಡಿಯಾಕ್ಕೆ ಇಂದು ಮರು ನಾಮಕರಣವಾಗಿದೆ. ಈ ಕಂಪನಿಗೆ ಇನ್ಮುಂದೆ ವಿಐ ಎಂದು ಕರೆಯಲಾಗುವುದು. 2018 ರಲ್ಲಿ ವೊಡಾಫೋನ್-ಐಡಿಯಾ ವಿಲೀನಗೊಂಡಿತ್ತು. ಆಗ ವೊಡಾಫೋನ್ ಐಡಿಯಾ ಎಂದೇ ಕಂಪನಿಯನ್ನು ಕರೆಯಲಾಗುತ್ತಿತ್ತು.
ಇಂದು ಕಂಪನಿಗೆ ಹೊಸ ಹೆಸರಿಡಲಾಗಿದೆ. ವಿಐ ಎಂದು ಕಂಪನಿಗೆ ಹೆಸರಿಡಲಾಗಿದ್ದು, ಲೋಗೋ ಕೂಡ ಬದಲಾಗಿದೆ. ಈ ಎರಡು ಬ್ರಾಂಡ್‌ಗಳ ವಿಲೀನವು ಇದುವರೆಗಿನ ವಿಶ್ವದ ಅತಿದೊಡ್ಡ ಟೆಲಿಕಾಂ ಏಕೀಕರಣವಾಗಿದೆ ಎಂದು ಕಂಪನಿ ಹೇಳಿದೆ. ವೊಡಾಫೋನ್ ಐಡಿಯಾ ಎಂಡಿ ರವೀಂದರ್ ಹೊಸ ಬ್ರಾಂಡ್ ಬಿಡುಗಡೆ ಮಾಡಿದ್ದಾರೆ.
ನಂತ್ರ ಮಾತನಾಡಿದ ಅವರು ಇದು ಖುಷಿ ತಂದಿದೆ ಎಂದಿದ್ದಾರೆ. ಇದೇ ವೇಳೆ ಸುಂಕ ಹೆಚ್ಚಳದ ಸೂಚನೆಯನ್ನೂ ಕಂಪನಿ ನೀಡಿದೆ. ಸುಂಕ ಸದ್ಯ 114 ರೂಪಾಯಿಯಿದೆ. ಏರ್ಟೆಲ್ ಹಾಗೂ ಜಿಯೋ ಬೆಲೆ ಕ್ರಮವಾಗಿ 157 ಮತ್ತು 140 ರೂಪಾಯಿಯಿದೆ. ಜಿಯೋ, ಏರ್ಟೆಲ್ ಮಧ್ಯೆ ತೀವ್ರ ಸ್ಪರ್ಧೆಯಿದೆ. ವೊಡಾಫೋನ್ ಐಡಿಯಾ ಚಂದಾದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗ್ತಿದ್ದು, ಕಂಪನಿ ಸಂಕಷ್ಟದಲ್ಲಿದೆ.