ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ(VIT) ಇಬ್ಬರು ವಿದ್ಯಾರ್ಥಿಗಳು ವಾರ್ಷಿಕ 75 ಲಕ್ಷ ರೂ. ವೇತನದ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ, 81 ವಿದ್ಯಾರ್ಥಿಗಳು ವಾರ್ಷಿಕ 25 ಲಕ್ಷ ರೂ. ವೇತನದ ಉದ್ಯೋಗಗಳಿಗೆ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.
ಜುಲೈ 15 ರಂದು ಮೊದಲ ಹಂತದ ಕ್ಯಾಂಪಸ್ ಸಂದರ್ಶನ ನಡೆಸಲಾಗಿದ್ದು, ವೆಲ್ಲೂರು, ಭೋಪಾಲ್, ಚೆನ್ನೈ, ಅಮರಾವತಿ ಕ್ಯಾಂಪಸ್ ವಿದ್ಯಾರ್ಥಿಗಳು ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮೈಕ್ರೋಸಾಫ್ಟ್ ಗೆ 21 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಉಡಾನ್ ಗೆ 3, ಡೈಟ್ ಕಂಪನಿಗೆ 6 ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಂಪನಿಗಳು ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಇವರಲ್ಲಿ ಡೈಟ್ ಕಂಪನಿಗೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಿಗೆ ವಾರ್ಷಿಕ 75 ಲಕ್ಷ ರೂಪಾಯಿ ವೇತನದ ಉದ್ಯೋಗ ದೊರೆತಿದೆ ಎಂದು ವೆಲ್ಲೂರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕುಲಪತಿ ಡಾ. ಜಿ. ವಿಶ್ವನಾಥನ್ ಮಾಹಿತಿ ನೀಡಿದ್ದಾರೆ.