ನಾಟಿಂಗ್‌ಹ್ಯಾಮ್‌ಶೈರ್‌ನ ಕ್ಲಂಬರ್ ಪಾರ್ಕ್‌ನಲ್ಲಿ ತಮ್ಮ ನಾಯಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ತಾವು “ರಾಕ್ಷಸ” ಆಕೃತಿಗೆ ಡಿಕ್ಕಿ ಹೊಡೆದಿರುವುದಾಗಿ ಬ್ರಿಟಿಷ್ ದಂಪತಿ ಇತ್ತೀಚೆಗೆ ಹೇಳಿಕೊಂಡಿದ್ದು ಇದು ನೆಟ್ಟಿಗರಿಗೆ ದಿಗ್ಭ್ರಮೆ ಮೂಡಿಸಿದೆ.
ಈ ಕುರಿತು ದಂಪತಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಹನ್ನಾ ಮತ್ತು ಡೇವ್ ರೋವೆಟ್ ಕತ್ತಲೆಯಲ್ಲಿ ತಮ್ಮ ಮುಂದೆ ತೆವಳುವ ಆಕೃತಿಯನ್ನು ದಾಟುವ ವಿಡಿಯೋ ಹಂಚಿಕೊಂಡಿದ್ದಾರೆ.
“ಇಂದು ಕ್ಲಂಬರ್‌ನಲ್ಲಿ ನಮ್ಮ ಮುಂಜಾನೆಯ ನಡಿಗೆಯಲ್ಲಿ ನಾವು ಒಬ್ಬಂಟಿಯಾಗಿರಲಿಲ್ಲ ಎಂದು ತೋರುತ್ತದೆ!” ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ. ಅವರು ಶೇರ್ ಮಾಡಿರುವ ವಿಡಿಯೋ ಭಯಾನಕವಾಗಿದೆ. ನೆರಳಿನಂತೆ ಇರುವ ಜೀವಿಯು ನಡೆದುಕೊಂಡು ಹೋಗುತ್ತಿದ್ದು, ನಂತರ ಕಣ್ಮರೆಯಾಗುವ ಮೊದಲು ಅವರ ಹಾದಿಯನ್ನು ದಾಟಿಕೊಂಡು ಹೋಗಿರುವುದನ್ನು ಕಾಣಬಹುದಾಗಿದೆ.
ಇದು ಭೂತ, ಪಿಶಾಚಿಯೋ ಇರಬೇಕು ಎಂದು ನೆಟ್ಟಿಗರು ಭಯಭೀತರಾಗಿದ್ದರೆ, ಇದ್ಯಾವುದೋ ಪ್ರಾಣಿ ಇರಬೇಕು ಎಂದು ಹಲವರು ಹೇಳುತ್ತಿದ್ದಾರೆ. ಸದ್ಯ ಈ ವಿಚಿತ್ರ ದೃಶ್ಯ ಮಾತ್ರ ಜನರಲ್ಲಿ ಭಯ ಮೂಡಿಸುತ್ತಿದೆ.
https://www.facebook.com/IamHannahRowett/posts/10228397052812341