ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಬಿದ್ದಿದೆ. ಮೊಬೈಲ್ ಕರೆ, ಎಸ್ಎಂಎಸ್ ಮತ್ತು ಇಂಟರ್ನೆಟ್ ಬಳಸಲು ಇನ್ಮುಂದೆ ಹೆಚ್ಚು ಹಣ ಪಾವತಿಸಬೇಕಾಗಿದೆ. ಟೆಲಿಕಾಂ ಕಂಪನಿಗಳು ಪೋಸ್ಟ್ ಪೇಯ್ಡ್ ಯೋಜನೆ ಬೆಲೆಗಳನ್ನು ದುಬಾರಿಗೊಳಿಸಿವೆ.
ವಿಐ ತನ್ನ ಯೋಜನೆಗಳನ್ನು ದುಬಾರಿಗೊಳಿಸಿದೆ. ವರದಿ ಪ್ರಕಾರ, ವಿಐ ತನ್ನ ಕೆಲವು ಪೋಸ್ಟ್ ಪೇಯ್ಡ್ ಯೋಜನೆಗಳ ಮಾಸಿಕ ಬಾಡಿಗೆಯನ್ನು ಹೆಚ್ಚಿಸಿದೆ. ಕಂಪನಿಯು ಎರಡು ಪೋಸ್ಟ್ ಪೇಯ್ಡ್ ಯೋಜನೆಗಳ ಬೆಲೆಯನ್ನು ಏರಿಸಿದೆ. ಮಾಹಿತಿ ಪ್ರಕಾರ, ವಿಐ 598 ರೂಪಾಯಿ ಮತ್ತು 649 ರೂಪಾಯಿ ಬೆಲೆ ಹೆಚ್ಚಳ ಮಾಡಿದೆ. 598 ರೂಪಾಯಿ ಯೋಜನೆಯನ್ನು 699 ರೂಪಾಯಿಗೆ ಹೆಚ್ಚಿಸಲಾಗಿದೆ. 649 ರೂಪಾಯಿ ಯೋಜನೆ ಬೆಲೆಯಲ್ಲಿ 150 ರೂಪಾಯಿ ಹೆಚ್ಚಾಗಿದ್ದು, ಇನ್ಮುಂದೆ ಗ್ರಾಹಕರು ಈ ಯೋಜನೆಗಾಗಿ 799 ರೂಪಾಯಿ ಪಾವತಿಸಬೇಕಾಗಿದೆ.
ದೇಶದ ಎಲ್ಲ ಭಾಗದಲ್ಲಿಯೂ ಹೊಸ ಬೆಲೆ ಜಾರಿಗೆ ಬರಲಿದೆ. 799 ರೂಪಾಯಿಗಳ ಹೊಸ ಯೋಜನೆಯಲ್ಲಿ ಅನಿಯಮಿತ ಕರೆ ಮತ್ತು ಉಚಿತ ಎಸ್ಎಂಎಸ್ ಹೊರತುಪಡಿಸಿ, ಬಳಕೆದಾರರು 120 ಜಿಬಿ ಡೇಟಾವನ್ನು ಪಡೆಯುತ್ತಾರೆ. ಗ್ರಾಹಕರು ಒಟಿಟಿ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತಾರೆ. ಟೆಲಿಕಾಂ ಆಪರೇಟರ್ಗಳಾದ ಏರ್ಟೆಲ್ ಮತ್ತು ಜಿಯೋ ಮುಂದಿನ ದಿನಗಳಲ್ಲಿ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.