ಹೆದ್ದಾರಿ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಅನಿವಾರ್ಯವಾಗಿದೆ. ಆದ್ರೆ ಈಗ್ಲೂ ಫಾಸ್ಟ್ಯಾಗ್ ಪಡೆಯದ ವಾಹನ ಚಾಲಕರು ಇನ್ನು ಸ್ವಲ್ಪ ದಿನ ನೆಮ್ಮದಿಯಿಂದಿರಬಹುದು. ಫೆಬ್ರವರಿ 15ರವರೆಗೆ ಫಾಸ್ಟ್ಯಾಗ್ ಪಡೆಯಲು ಅವಕಾಶ ನೀಡಲಾಗಿದೆ.
ಫೆಬ್ರವರಿ 16ರಿಂದ ಎಲ್ಲ ಹೆದ್ದಾರಿ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ. ನಗದು ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಫಾಸ್ಟ್ಯಾಗ್ ಇಲ್ಲದ ವಾಹನಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ. ಜನವರಿ ಒಂದರಿಂದಲೇ ಫಾಸ್ಟ್ಯಾಗ್ ಅನಿವಾರ್ಯ ಮಾಡಲಾಗಿತ್ತು. ಆದ್ರೆ ಕೊರೊನಾ ಕಾರಣದಿಂದಾಗಿ ಜನವರಿ 15ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಫಾಸ್ಟ್ಯಾಗ್ ಖರೀದಿಸಲು ವಾಹನ ಚಾಲಕರಿಗೆ ಅನೇಕ ಆಯ್ಕೆಗಳನ್ನು ನೀಡಲಾಗಿದೆ. ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಯ ಯಾವುದೇ ಟೋಲ್ ಫ್ಲಾಜಾದಲ್ಲಿ ಫಾಸ್ಟ್ಯಾಗ್ ಖರೀದಿ ಮಾಡಬಹುದು. ವಾಹನದ ಆರ್ ಸಿಯನ್ನು ತೋರಿಸಬೇಕಾಗುತ್ತದೆ. ಫಾಸ್ಟ್ಯಾಗನ್ನು ಬ್ಯಾಂಕ್, ಅಮೆಜಾನ್, ಪೇಟಿಎಂ, ಏರ್ಟೆಲ್ ಪಾವತಿ ಬ್ಯಾಂಕ್ ಗಳಿಂದ ಖರೀದಿ ಮಾಡಬಹುದು. ಎಸ್ಬಿಐ, ಎಚ್ ಡಿಎಫ್ ಸಿ, ಐಸಿಐಸಿಐ, ಆಕ್ಸಿಸ್, ಕೊಟಾಕ್ ಬ್ಯಾಂಕ್ ನಿಂದಲೂ ನೀವು ಖರೀದಿ ಮಾಡಬಹುದಾಗಿದೆ.
ಫಾಸ್ಟ್ಯಾಗ್ ಎಲ್ಲಿಂದ ಖರೀದಿ ಮಾಡ್ತಿದ್ದೀರಿ ಎನ್ನುವುದರ ಮೇಲೆ ಬೆಲೆ ನಿಗಧಿಯಾಗುತ್ತದೆ. ಬೇರೆ ಬೇರೆ ಬ್ಯಾಂಕ್ ಗಳ ಶುಲ್ಕ ಭಿನ್ನವಾಗಿದೆ.