ನವದೆಹಲಿ: ಹಳದಿ ಬೋರ್ಡ್ ವಾಹನಕ್ಕೆ ‘ನಾವಿಕ’ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು. ಹೆಚ್ಚುತ್ತಿರುವ ಅಪಘಾತ, ತೆರಿಗೆ ವಂಚನೆ ತಡೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಎಲ್ಲ ಜಿಲ್ಲೆಗಳಲ್ಲಿಯೂ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗುವುದು ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ಆಗುತ್ತಿರುವ ತೆರಿಗೆ ವಂಚನೆ ತಡೆಯುವ ಸಲುವಾಗಿ ಮತ್ತು ಹೆಚ್ಚುತ್ತಿರುವ ಅಪಘಾತ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಎಲ್ಲಾ ಹಳದಿ ಬೋರ್ಡು ವಾಹನಗಳಿಗೆ ಇಸ್ರೋದ ನಾವಿಕ ತಂತ್ರಜ್ಞಾನವನ್ನು ಬಳಕೆ ಮಾಡುವ ಕುರಿತಾಗಿ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಲಾರಿ, ಬಸ್, ಗೂಡ್ಸ್ ವಾಹನ, ಓಲಾ, ಉಬರ್ ಸೇರಿದಂತೆ ಎಲ್ಲ ಹಳದಿ ಬೋರ್ಡ್ ವಾಹನಗಳಿಗೆ ನಾವಿಕ ತಂತ್ರಜ್ಞಾನ ಅಳವಡಿಸಲಿದ್ದು, ಎಲ್ಲ ಜಿಲ್ಲೆಗಳಲ್ಲಿಯೂ ಕಂಟ್ರೋಲ್ ರೂಂ ಸ್ಥಾಪಿಸಿ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ನಾವಿಕ ತಂತ್ರಜ್ಞಾನ ಅಳವಡಿಕೆಯಿಂದ ಅಪಘಾತ ತಡೆಯಬಹುದು, ತೆರಿಗೆ ವಂಚನೆಗೆ ಬ್ರೇಕ್ ಬಹುದಾಗಿದೆ ಎಂದು ತಿಳಿಸುವ ಅವರು ಈ ಸಲುವಾಗಿ ಕೇಂದ್ರ ಸಚಿವರ ಭೇಟಿ ಮಾಡಲು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.