ನವದೆಹಲಿ: ವಾಹನ ಉದ್ಯಮಕ್ಕೆ ಉತ್ತೇಜನ ನೀಡಲು ಈ ತಿಂಗಳ ಅಂತ್ಯಕ್ಕೆ ಗುಜರಿ ನೀತಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಹೊಸ ವಾಹನ ಖರೀದಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಳೆಯ, ಮಾಲಿನ್ಯ ವಾಹನಗಳ ವಿಲೇವಾರಿಗೆ ಗುಜರಿ ನೀತಿಯನ್ನು ಮಾಸಾಂತ್ಯಕ್ಕೆ ಜಾರಿಗೆ ತರಲಾಗುವುದು. ಹಳೆಯ ವಾಹನ ಗುಜರಿಗೆ ಹಾಕಿದರೆ ಅದಕ್ಕೆ ಹಣಕಾಸಿನ ನೆರವು ನೀಡುವ ಜೊತೆಗೆ ಹೊಸ ವಾಹನ ಖರೀದಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದ್ದಾರೆ.
ಹಳೆಯ ವಾಹನಗಳನ್ನು ಗುಜರಿಗೆ ಹಾಕಿದಲ್ಲಿ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಾಗಿ ವಾಹನೋದ್ಯಮ ಚೇತರಿಸಿಕೊಳ್ಳುತ್ತದೆ. ಹಳೆ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಜಾರಿಗೊಳಿಸಬೇಕೆಂದು ವಾಹನೋದ್ಯಮಿಗಳ ಬೇಡಿಕೆಯಾಗಿದೆ.
ಗುಜರಿ ನೀತಿ ಜಾರಿಗೆ ತಂದಲ್ಲಿ 2020 -21 ರ ಹಣಕಾಸು ವರ್ಷದಲ್ಲಿ ಸುಮಾರು 90 ಲಕ್ಷ ವಾಹನಗಳು ಸಂಚಾರ ನಿಲ್ಲಿಸಲಿವೆ. ವಾಹನಗಳ ಬಿಡಿ ಉಪಕರಣಗಳನ್ನು ಮರುಬಳಕೆ ಮಾಡಲು ಅಗತ್ಯ ಘಟಕಗಳಿಗೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ ತಿಂಗಳ ಅಂತ್ಯಕ್ಕೆ ಗುಜರಿ ಯೋಜನೆ ಜಾರಿಗೆ ತರಲಾಗುವುದು. ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಸಬ್ಸಿಡಿ ನೀಡಲಾಗುವುದು ಎಂದು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.