ನವದೆಹಲಿ: ವಾಹನ ಗುಜರಿ ನೀತಿಗೆ ಚಾಲನೆ ನೀಡಲಾಗಿದೆ. ಸರ್ಕಾರಿ ವಾಹನಗಳಿಗೆ ಇದು ಕಡ್ಡಾಯವಾಗಿದೆ. ಹಳೆಯ ವಾಹನಗಳನ್ನು ಜನ ಸ್ವಯಂಪ್ರೇರಿತರಾಗಿ ಗುಜರಿಗೆ ಹಾಕಿದಲ್ಲಿ ಹೊಸ ವಾಹನ ಖರೀದಿಸುವ ಸಂದರ್ಭದಲ್ಲಿ ನೋಂದಣಿ ಶುಲ್ಕ ಕಟ್ಟಬೇಕಿಲ್ಲ. ತೆರಿಗೆಯಿಂದ ವಿನಾಯಿತಿ ಸಿಗಲಿದೆ.
ರಸ್ತೆಗಳಿಂದ ಹಳೆಯ ವಾಹನ ತೆರವುಗೊಳಿಸಲಾಗುತ್ತದೆ. ವಾಹನಗಳಲ್ಲಿನ ಲೋಹಗಳನ್ನು ಪುನರ್ ಬಳಕೆ ಮಾಡಲಾಗುವುದು. ಇದರಿಂದ ರಸ್ತೆಗೆ ಹೊಸ ವಾಹನಗಳು ರಸ್ತೆಗೆ ಇಳಿಯಲಿದ್ದು, ಆಟೋಮೊಬೈಲ್ ಉದ್ಯಮಕ್ಕೆ ಅನುಕೂಲವಾಗಲಿದೆ.
ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಸರ್ಕಾರದಿಂದ ಪ್ರಮಾಣಪತ್ರ ನೀಡಲಿದ್ದು, ಇದನ್ನು ತೋರಿಸಿ ಹೊಸ ವಾಹನ ಖರೀದಿಸುವಾಗ ವಿನಾಯಿತಿ ಪಡೆಯಬಹುದು. ರಸ್ತೆ ತೆರಿಗೆ ನೋಂದಣಿ ಶುಲ್ಕ ಇರಲ್ಲ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಜರಾತ್ ನಲ್ಲಿ ಹಳೆಯ ವಾಹನಗಳ ಗುಜರಿ ನೀತಿಗೆ ಚಾಲನೆ ನೀಡಿದ್ದಾರೆ.