ಬೆಂಗಳೂರು: ಡಿಸೆಂಬರ್ 31 ರವರೆಗೆ ಮೋಟಾರು ವಾಹನಗಳ ಸಿಂಧುತ್ವ ಅವಧಿಯನ್ನು ವಿಸ್ತರಣೆ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮ 1989 ರ ಅಡಿ ವಾಹನಗಳ ಸಿಂಧುತ್ವವನ್ನು ವಿಸ್ತರಣೆ ಮಾಡಲಾಗಿದೆ.
ಸಾರಿಗೆ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಮೋಟಾರು ವಾಹನಗಳ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮದ ಅಡಿಯಲ್ಲಿ ವಿತರಿಸಲಾದ ಎಲ್ಲ ರೀತಿಯ ವಾಹನ ದಾಖಲೆಗಳ ಸಿಂಧುತ್ವ ಮುಕ್ತಾಯಗೊಂಡಿರುವ ದಾಖಲಾತಿಗಳಿಗೆ ಅವಧಿಯನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ. 2020 ರ ಫೆಬ್ರವರಿ 1 ರ ವೇಳೆಗೆ ಸಿಂಧುತ್ವ ಅವಧಿ ಮುಕ್ತಾಯಗೊಂಡಿದ್ದರು ಮಾನ್ಯವಾಗಿರುತ್ತದೆ ಎಂದು ಹೇಳಲಾಗಿದೆ.