ನವದೆಹಲಿ: ವಾಹನಗಳ ಪರವಾನಿಗೆ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ವಾಹನ ನೋಂದಣಿ ಪ್ರಮಾಣಪತ್ರ, ಡ್ರೈವಿಂಗ್ ಲೈಸೆನ್ಸ್ ಪರ್ಮಿಟ್ ಗಳ ಅವಧಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಜೂನ್ 30 ಕೊನೆಯ ದಿನವಾಗಿತ್ತು. ಕೊರೋನಾ ಕಾರಣದಿಂದಾಗಿ ಜನರಿಗೆ ಅನುಕೂಲ ಕಲ್ಪಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಕ್ರಮ ಕೈಗೊಂಡಿದೆ. ವಾಹನಗಳ ನೋಂದಣಿ ಪ್ರಮಾಣಪತ್ರ, ಫಿಟ್ನೆಸ್ ವ್ಯಾಲಿಡಿಟಿ ಸೇರಿದಂತೆ ಎಲ್ಲಾ ವಿಧದ ಪರ್ಮಿಟ್, ಲೈಸೆನ್ಸ್ ಹಾಗೂ ಸಂಬಂಧಿಸಿದ ದಾಖಲೆಗಳ ಅವಧಿ ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ.