ಬೆಂಗಳೂರು: ಅವಧಿ ಮುಗಿದಿರುವ ವಾಹನಗಳ ತಾತ್ಕಾಲಿಕ ನೋಂದಣಿಯನ್ನು ಸಾರಿಗೆ ಇಲಾಖೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮಾರ್ಚ್ 24 ರ ನಂತರ ವಾಹನಗಳ ತಾತ್ಕಾಲಿಕ ನೋಂದಣಿ ಅವಧಿಯನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ. ಲಾಕ್ಡೌನ್ ಜಾರಿಯಾಗಿದ್ದರಿಂದ ಸಾರಿಗೆ ಕಚೇರಿ ಕಾರ್ಯನಿರ್ವಹಿಸಿರಲಿಲ್ಲ. ಈ ಅವಧಿಯಲ್ಲಿ ತಾತ್ಕಾಲಿಕ ನೋಂದಣಿ ಮುಗಿದ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಅವಧಿ ಮುಗಿದಿರುವ ವಾಹನಗಳ ತಾತ್ಕಾಲಿಕ ನೋಂದಣಿಗಳಿಗೆ ಮಾತ್ರ ಅನ್ವಯವಾಗುವಂತೆ ಜುಲೈ 31 ರವರೆಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.