ಹೊಸ ವಾಹನಗಳನ್ನು ಖರೀದಿಸಿದವರಿಗೆ HSRP ನಂಬರ್ ಪ್ಲೇಟ್ ಅಳವಡಿಸಿ ವಾಹನ ನೀಡುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹೊಸ ವಾಹನ ಮಾರಾಟ ಮಳಿಗೆಯವರು ಕಡ್ಡಾಯವಾಗಿ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಿದ ನಂತರವೇ ವಾಹನ ಹಸ್ತಾಂತರ ಮಾಡಬೇಕೆಂದು ತಿಳಿಸಲಾಗಿದೆ. ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವ ಮೊದಲು ಅಂತಹ ವಾಹನಗಳನ್ನು ಖರೀದಿದಾರರಿಗೆ ಹಸ್ತಾಂತರ ಮಾಡಬಾರದು ಎಂದು ಸೂಚಿಸಲಾಗಿದೆ.
ಆನ್ಲೈನ್ ನಲ್ಲಿ ಶುಲ್ಕ ಪಾವತಿಸಿದ ಕೂಡಲೇ ವಾಹನ ನೋಂದಣಿ ಸಂಖ್ಯೆ ಪಡೆದುಕೊಳ್ಳಲು ಅವಕಾಶವಿದೆ. ಮೋಟಾರ್ ವಾಹನಗಳ ಕಾಯ್ದೆಯ ಪ್ರಕಾರ ವಾಹನ ಮಾರಾಟ ಮಳಿಗೆಯವರು ನೋಂದಣಿ ಸಂಖ್ಯೆ ಪಡೆದು ವಾಹನಕ್ಕೆ ಅಳವಡಿಸಿದ ನಂತರವೇ ಅದನ್ನು ಖರೀದಿದಾರರಿಗೆ ಹಸ್ತಾಂತರ ಮಾಡಬೇಕಿದೆ.
ಹೊಸ ವಾಹನ ಮಾರಾಟ ಮಾಡಿದ ನಂತರ ನೋಂದಾಯಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸುತ್ತಿದ್ದು, ನೋಂದಣಿ ಸಂಖ್ಯೆ ಪಡೆದು ಅದನ್ನು ವಾಹನದಲ್ಲಿ ಅಳವಡಿಸಲು ಸಮಯ ಹಿಡಿಯುತ್ತಿತ್ತು. ನೋಂದಣಿ ಸಂಖ್ಯೆ ಇಲ್ಲದೆ ವಾಹನ ರಸ್ತೆಗೆ ಇಳಿಸಲು ಅವಕಾಶವಿಲ್ಲ. ಅಲ್ಲದೆ 2019ರ ಏಪ್ರಿಲ್ 1ರ ನಂತರ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ –HSRP ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಹೊಸ ವಾಹನ ಖರೀದಿಸಿದವರಿಗೆ ವಾಹನ ಮಾರಾಟ ಮಳಿಗೆಯವರು ಕಡ್ಡಾಯವಾಗಿ HSRP ನೋಂದಣಿ ಫಲಕ ಅಳವಡಿಸಿದ ನಂತರವೇ ವಾಹನ ಹಸ್ತಾಂತರ ಮಾಡಬೇಕು ಎಂದು ಹೇಳಲಾಗಿದೆ.