alex Certify BIG NEWS: ಕಾರ್ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಸಾರಿಗೆ ವಾಹನ ಚಾಲನೆ ಮಾಡಬಹುದು, ಪ್ರತ್ಯೇಕ ಲೈಸೆನ್ಸ್ ಬೇಕಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾರ್ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಸಾರಿಗೆ ವಾಹನ ಚಾಲನೆ ಮಾಡಬಹುದು, ಪ್ರತ್ಯೇಕ ಲೈಸೆನ್ಸ್ ಬೇಕಿಲ್ಲ

ಬೆಂಗಳೂರು: ಲಘು ಮೋಟಾರು ವಾಹನ ಚಾಲನೆ ಪರವಾನಿಗೆ ಹೊಂದಿದವರು ಸಾರಿಗೆ ವಾಹನಗಳನ್ನು ಕೂಡ ಚಾಲನೆ ಮಾಡಬಹುದಾಗಿದ್ದು, ಇದಕ್ಕಾಗಿ ಪ್ರತ್ಯೇಕ ಲೈಸೆನ್ಸ್ ಅಗತ್ಯವಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ.

ಸರಕು ಸಾಗಣೆ ವಾಹನ ಚಾಲನೆ ಪರವಾನಿಗೆ ಪಡೆದುಕೊಂಡೇ ಸಾರಿಗೆ ವಾಹನ ಚಾಲನೆ ಮಾಡಬೇಕೆಂದು ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಹಂಚೇಟಿ ಸಂಜೀವಕುಮಾರ್ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ.

ವಾಹನಗಳ ಪ್ರವರ್ಗಕ್ಕೆ ಚಾಲಕ ಪರವಾನಿಗೆ ಹೊಂದಿರುತ್ತಾನೆ ಹೊರತೂ ವಾಹನಗಳ ವಿಧಗಳಿಗೆ ಅಲ್ಲ. ಕೆಲವೊಂದು ಪ್ರವರ್ಗದಲ್ಲಿ ಹಲವು ರೀತಿಯ ವಾಹನಗಳಿರುತ್ತವೆ. ಪ್ರವರ್ಗದ್ಲಲಿ ಬರುವ ವಾಹನಗಳಿಗೆ ಒಂದೇ ರೀತಿಯ ಪರವಾನಿಗೆ ಪಡೆಯಬೇಕು. ಪ್ರತಿ ವಿಧದ ವಾಹನಕ್ಕೆ ಪ್ರತ್ಯೇಕ ಚಾಲನೆ ಪರವಾನಿಗೆ ಪಡೆಯುವ ಅಗತ್ಯವಿಲ್ಲ, LMV ಪ್ರವರ್ಗದಲ್ಲಿ ಸಾರಿಗೆ ವಾಹನ ಕೂಡ ಸೇರಿದೆ. LMV  ಪರವಾನಗಿ ಹೊಂದಿರುವ ಚಾಲಕ ಪ್ರವರ್ಗದ ಎಲ್ಲಾ ವಾಹನಗಳನ್ನು ಚಾಲನೆ ಮಾಡಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.

ಮೋಟಾರು ವಾಹನ ಕಾಯ್ದೆಯ ಪ್ರಕಾರ ಸರಕು ಸಾಗಣೆ ವಾಹನ ಕೂಡ ಸಾರಿಗೆ ಸಾರಿಗೆ ವಾಹನವಾಗಿದೆ. LMV ಚಾಲನೆ ಪರವಾನಿಗೆ ಹೊಂದಿದವರು ಪ್ರಯಾಣಿಕರಿಗೆ ಬಾಡಿಗೆಗೆ ಬಳಸುವ, ಅದೇ ಮಾದರಿ ಬಳಕೆಗೆ ನೊಂದಣಿಯಾದ ಅಥವಾ ವಿಮೆ ಸೌಲಭ್ಯ ಪಡೆದ ವಾಹನ ಚಾಲನೆ ಮಾಡಬಹುದು. ಸಾರಿಗೆ ವಾಹನ ಚಾಲನೆಗೆ ಪ್ರತ್ಯೇಕವಾದ ಅನುಮೋದನೆ ಪಡೆಯುವ ಅಗತ್ಯವಿಲ್ಲವೆಂದು ಹೈಕೋರ್ಟ್ ಹೇಳಿದೆ.

2009ರ ಮಾರ್ಚ್ 28ರಂದು ಕೋಲಾರದಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅಪಘಾತವನ್ನುಂಟು ಮಾಡಿದ್ದ ಟಾಟಾ ಏಸ್ ವಾಹನಕ್ಕೆ ವಿಮೆ ಸೌಲಭ್ಯ ಕಲ್ಪಿಸಿದ್ದ ಓರಿಯಂಟಲ್ ಇನ್ಶುರೆನ್ಸ್ ಕಂಪನಿಗೆ 1.97 ಲಕ್ಷ ರೂ ಪರಿಹಾರ ನೀಡುವಂತೆ ಮೋಟಾರು ವಾಹನ ನ್ಯಾಯಾಧೀಕರಣ ಆದೇಶಿಸಿದ್ದು, ಇದರ ವಿರುದ್ಧ ಕಂಪನಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಅಪಘಾತ ನಡೆಸಿದ ಟಾಟಾ ಏಸ್ ಸರಕು ಸಾಗಣೆ ವಾಹನವಾಗಿದ್ದು, ಚಾಲಕ ಸಾರಿಗೆ ವಾಹನ ಚಾಲನೆ ಪರವಾನಿಗೆ ಹೊಂದಿಲ್ಲ ಎಂದು ವಾದಿಸಲಾಗಿತ್ತು. ಇದನ್ನು ಹೈಕೋರ್ಟ್ ಒಪ್ಪದೇ LMV ಲೈಸೆನ್ಸ್ ಹೊಂದಿದವರು ಸರಕು ಸಾಗಣೆ ವಾಹನವನ್ನೂ ಚಾಲನೆ ಮಾಡಬಹುದು ಎಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...