ಬೆಂಗಳೂರು: ಸಾರ್ವಜನಿಕ ಸೇವಾ ವಾಹನಗಳಿಗೆ ಡಿಸೆಂಬರ್ 1ರಿಂದ ಪ್ಯಾನಿಕ್ ಬಟನ್ -ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್(VLT) ಅಳವಡಿಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಒಂದು ವರ್ಷದ ಅವಧಿಯೊಳಗೆ ವಿ.ಎಲ್.ಟಿ. ಅಳವಡಿಸಿಕೊಳ್ಳಲು ಗಡುವು ನೀಡಲಾಗಿದೆ.
ಮಹಿಳೆಯರು, ಮಕ್ಕಳು ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಎಲ್ಲಾ ರೀತಿಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಟ್ರಾಕಿಂಗ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಬೇಕಿದೆ. 2024ರ ನವೆಂಬರ್ 30ರವರೆಗೆ ಅಳವಡಿಕೆಗೆ ಅವಕಾಶ ನೀಡಲಾಗಿದೆ.
ಯೆಲ್ಲೋ ಬೋರ್ಡ್ ಟ್ಯಾಕ್ಸಿಗಳು, ಕ್ಯಾಬ್ ಗಳು, ಖಾಸಗಿ ಬಸ್ ಗಳು, ನ್ಯಾಷನಲ್ ಪರ್ಮಿಟ್ ಹೊಂದಿದ ಗೂಡ್ಸ್ ವಾಹನಗಳಿಗೆ ಇದು ಅನ್ವಯವಾಗಲಿದೆ. ಜಿ.ಎಸ್.ಟಿ. ಹೊರತುಪಡಿಸಿ ವಿ.ಎಲ್.ಟಿ. ವಿತ್ ಪ್ಯಾನಿಕ್ ಬಟನ್ ದರ 7599 ರೂ. ನಿಗದಿಪಡಿಸಲಾಗಿದೆ. ವಾಹನ ಎಲ್ಲಿದೆ, ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ, ಮಾರ್ಗ ಬದಲಾವಣೆ, ವೇಗ, ನಿರ್ಬಂಧಿತ ಪ್ರದೇಶ, ಸಂಚಾರ ನಿಯಮ ಮೊದಲಾದ ಎಚ್ಚರಿಕೆ ಹಾಗೂ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ.