ಹುಬ್ಬಳ್ಳಿ: ಸತತ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗುತ್ತಿದ್ದು ಇದರ ಪರಿಣಾಮ ಬೆಲೆ ಗಗನಕ್ಕೇರುತ್ತಿದೆ. ಈರುಳ್ಳಿ ಬೆಲೆ ಕೆಜಿಗೆ 50 ರೂಪಾಯಿ ಗಡಿದಾಟಿದೆ.
15 ದಿನಗಳ ಹಿಂದೆ ಕೆಜಿಗೆ 20 ರೂಪಾಯಿ ದರದಲ್ಲಿದ್ದ ಈರುಳ್ಳಿ ಈಗ 55 ರೂಪಾಯಿಯಿಂದ 65 ರೂ. ವರೆಗೆ ಮಾರಾಟವಾಗುತ್ತಿದೆ. ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್ ಗೆ 5 ಸಾವಿರ ರೂಪಾಯಿವರೆಗೆ ಇದೆ. ಸತತ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ.
ಅಲ್ಲದೇ, ಬೆಳೆಗಾರರಿಗೆ ಉತ್ತಮ ದರ ಸಿಕ್ಕರೂ ತೇವಾಂಶ ಜಾಸ್ತಿ ಇರುವುದರಿಂದ ಈರುಳ್ಳಿ ಹಾಳಾಗತೊಡಗಿದ್ದು ಹೊಲದಲ್ಲಿರುವ ಬೆಳೆ ನೀರಿನಲ್ಲಿ ಕೊಳೆಯುತ್ತಿದೆ. ಇದರಿಂದ ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಅದೇ ರೀತಿ ಟೊಮೆಟೊ ಸೇರಿ ತರಕಾರಿ ಬೆಲೆ ಕೂಡ ಜಾಸ್ತಿಯಾಗಿದೆ. ಈರುಳ್ಳಿ ಸೇರಿ ತರಕಾರಿ ಬೆಲೆ ಹೆಚ್ಚಾಗಿದ್ದು ಗ್ರಾಹಕರಿಗೆ ಬಿಸಿ ತಟ್ಟಿದೆ ಎನ್ನಲಾಗಿದೆ.