ನವದೆಹಲಿ: ಆಹಾರ ಪದಾರ್ಥ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಕೊಂಚ ನೆಮ್ಮದಿ ಸುದ್ದಿ ಇಲ್ಲಿದೆ.
ಸೆಪ್ಟೆಂಬರ್ ನಲ್ಲಿ ತರಕಾರಿ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ನಲ್ಲಿ ತರಕಾರಿ ತಾಜಾ ಬೆಳೆ ಬರಲಿದ್ದು, ಪೂರೈಕೆ ಹೆಚ್ಚಳವಾಗುವುದರಿಂದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಬೆಲೆ ಇಳಿಕೆ ನಿರೀಕ್ಷೆಯಲ್ಲಿದೆ.
ಕೇಂದ್ರ ಸರ್ಕಾರ ಗೋಧಿ ಮತ್ತು ಅಕ್ಕಿ ದಾಸ್ತಾನು ಮುಕ್ತಗೊಳಿಸಿದ್ದು, ಸಕ್ಕರೆ ಮತ್ತು ಅಕ್ಕಿ ರಫ್ತು ನಿರ್ಬಂಧಿಸಿದೆ. ಮಳೆ ಕೊರತೆ ಮುಂಗಾರು ಬಿತ್ತನೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಇವೆಲ್ಲ ಕ್ರಮಗಳು ಫಲ ನೀಡುವ ಸಾಧ್ಯತೆ ಇದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಟೊಮೆಟೊ ದರ ಕಡಿಮೆ ಮಾಡಲು ಕೈಗೊಂಡ ಉಪಕ್ರಮಗಳು ಫಲ ನೀಡಿದೆ. ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಕಡಿಮೆಯಾಗಲಿದ್ದು, ಶೇಕಡ 6 ರಷ್ಟು ಮಳೆ ಕೊರತೆಯಾಗಿದ್ದು ಕೃಷಿ ಉದ್ಯಮ ಪ್ರಬಲವಾಗಿರುವುದರಿಂದ ಮುಂಗಾರು ಬಿತ್ತನೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ. ರಷ್ಯಾ –ಉಕ್ರೇನ್ ಯುದ್ಧದ ಕಾರಣ ವಿಶ್ವದಲ್ಲೇ ಆಹಾರ ಪದಾರ್ಥಗಳ ದರ ಏರಿಕೆಯಾಗಿದೆ. ಬೆಲೆ ಕಡಿಮೆ ಮಾಡಲು ಭಾರತ ಸರ್ಕಾರ ನಾನಾ ವ್ಯಾಪಾರ ತಂತ್ರ ಅನುಸರಿಸುತ್ತಿದೆ ಎಂದು ಹೇಳಲಾಗಿದೆ.