ಬೆಂಗಳೂರು: ಮೊಟ್ಟೆ, ತರಕಾರಿ ದರ ಇಳಿಕೆಯಾಗಿದೆ. ಬೇಡಿಕೆ ಕುಸಿದ ಕಾರಣ ಮೊಟ್ಟೆಯ ದರ ಒಂದು ರೂಪಾಯಿಯಷ್ಟು ಕಡಿಮೆಯಾಗಿದೆ.
ಎರಡು ವಾರಗಳ ಹಿಂದೆ ಮೊಟ್ಟೆ ಒಂದಕ್ಕೆ 6.50 ರೂ ನಿಂದ 7 ರುಪಾಯಿವರೆಗೆ ಮಾರಾಟವಾಗಿತ್ತು. ಈಗ ಮೊಟ್ಟೆ ದರ ಇಳಿಕೆಯಾಗಿದ್ದು, ಚಿಲ್ಲರೆ ದರದಲ್ಲಿ 6 ರೂ.ಗೆ ಮಾರಾಟವಾಗಿದೆ. ಉತ್ಪಾದನೆ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಶ್ರಾವಣಮಾಸ ಸಮೀಪಿಸುತ್ತಿರುವುದರಿಂದ ಮಾರಾಟಗಾರರು ಮೊಟ್ಟೆಯನ್ನು ಸಂಗ್ರಹಿಸುತ್ತಿಲ್ಲ. ಇದರಿಂದ ಬೇಡಿಕೆ ಕಡಿಮೆಯಾಗಿ ಮೊಟ್ಟೆಯ ದರ ಸ್ವಲ್ಪ ತಗ್ಗಿದೆ. ಫಾರಂ ಧಾರಣೆ ಮೊಟ್ಟೆ ದರ 4.45 ರೂ.ಗೆ ಇಳಿಕೆಯಾಗಿದ್ದು, ಸಗಟು ದರ ರೂ.5 ಹಾಗೂ ಚಿಲ್ಲರೆ ದರ 5.50 ರೂ.ನಿಂದ 6 ರೂ.ವರೆಗೆ ಇದೆ.
ತರಕಾರಿ ದರ ಕೂಡ ಕಡಿಮೆಯಾಗಿದೆ. ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಟೊಮೆಟೊ ದರ ಕೆಜಿಗೆ 10 ರಿಂದ 15 ರೂ., ಬೀನ್ಸ್ ಕೆಜಿಗೆ 40 ರೂ., ನುಗ್ಗೆಕಾಯಿ 44 ರೂ., ಮೂಲಂಗಿ 29 ರೂ., ಈರುಳ್ಳಿ 33 ರು. ದರ ಇದ್ದು, ಸೊಪ್ಪಿನ ದರ ಕೂಡ ಕಡಿಮೆಯಾಗಿದೆ.