ಕಲಬುರಗಿ: ಶ್ರೀಮಂತ ರೈತರು, ರಾಜಕಾರಣಿಗಳು ಸಬ್ಸಿಡಿ ಬಿಟ್ಟುಕೊಟ್ಟರೆ ಹೆಚ್ಚಿನ ವಿದ್ಯುತ್ ಖರೀದಿಸಿ ಇನ್ನಷ್ಟು ಬಡರೈತರಿಗೆ ಕೊಡಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ರೈತರಿಗೆ 7 ಗಂಟೆ ವಿದ್ಯುತ್ ನೀಡಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ರೈತರಿಗೆ ಅನುಕೂಲವಾಗಲು ಮತ್ತು ಆಹಾರ ಉತ್ಪಾದನೆಗೆ ನೆರವಾಗುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಶ್ರೀಮಂತ ರೈತರು ಮತ್ತು ಹಿರಿಯ ಅಧಿಕಾರಿಗಳು ತಮ್ಮ ಜಮೀನುಗಳಲ್ಲಿ ಇರುವ ಕೃಷಿ ಪಂಪ್ ಸೆಟ್ ಗೆ ಅನ್ವಯವಾಗುವಂತಹ ವಿದ್ಯುತ್ ಸಬ್ಸಿಡಿಯನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು. ಸಬ್ಸಿಡಿ ಪಡೆಯದೇ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣದಲ್ಲಿ ಶೇಕಡ 36 ರಷ್ಟು ಕೃಷಿ ಪಂಪ್ಸೆಟ್ ಗಳಿಗೆ ನೀಡಲಾಗುತ್ತಿದೆ. ಶ್ರೀಮಂತ ರೈತರು, ರಾಜಕಾರಣಿಗಳು ಸಬ್ಸಿಡಿ ಬಿಟ್ಟು ಕೊಡಲಿ ಎಂದು ಮನವಿ ಮಾಡಿದ್ದಾರೆ.