ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗಾಗಿ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಪಿಎಫ್ ಖಾತೆದಾರರು ವಾಟ್ಸಾಪ್ ಮೂಲಕವೂ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇನ್ಮುಂದೆ ಪಿಎಫ್ ಕಚೇರಿಗೆ ಭೇಟಿ ನೀಡುವ ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ. ವಾಟ್ಸಾಪ್ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಇಪಿಎಫ್‌ಒದ ಎಲ್ಲಾ 138 ಪ್ರಾದೇಶಿಕ ಕಚೇರಿಗಳಲ್ಲಿ ವಾಟ್ಸಾಪ್ ಸಹಾಯವಾಣಿ ಸೇವೆಯನ್ನು ಪ್ರಾರಂಭಿಸಿದೆ. ಯಾವುದೇ ಇಪಿಎಫ್‌ಒ ಸದಸ್ಯರು ವಾಟ್ಸಾಪ್ ಸಂದೇಶದ ಮೂಲಕ ದೂರು ನೀಡಬಹುದು. ಖಾತೆದಾರರು ತಮ್ಮ ಪ್ರದೇಶದ ವಾಟ್ಸಾಪ್ ಸಂಖ್ಯೆಯನ್ನು ತಿಳಿಯಲು ಇಪಿಎಫ್‌ಒ https://www.epfindia.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು
ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಿತ್ ಡ್ರಾ ಮಾಡುವಾಗ ಮಧ್ಯವರ್ತಿಗಳ ಹಾವಳಿ ಹೆಚ್ಚಿರುತ್ತದೆ. ಇದನ್ನು ತಪ್ಪಿಸಲು ಇಪಿಎಫ್ಒ ಈ ಸೇವೆ ಶುರು ಮಾಡಿದೆ. ಎಲ್ಲಾ ಖಾತೆದಾರರ ಸಮಸ್ಯೆಗಳನ್ನು ಆನ್‌ಲೈನ್ ಮೂಲಕ ಪರಿಹರಿಸುವುದು ಸರ್ಕಾರದ ಪ್ರಯತ್ನವಾಗಿದೆ.
ಉದ್ಯೋಗಿಯ ಮೂಲ ವೇತನದ ಶೇಕಡಾ 12 ರಷ್ಟು ಪಿಎಫ್ ಖಾತೆಗೆ ಹೋಗುತ್ತದೆ. ಇಷ್ಟೇ ಪಾಲನ್ನು ಉದ್ಯೋಗದಾತ ನೀಡುತ್ತಾನೆ. ಒಟ್ಟು ಮೊತ್ತಕ್ಕೆ ಸರ್ಕಾರ ಬಡ್ಡಿ ಪಾವತಿ ಮಾಡುತ್ತದೆ. ಸಾಮಾನ್ಯವಾಗಿ, ಪಿಎಫ್ ಖಾತೆಯ ಬಡ್ಡಿದರವು ಇತರ ಖಾತೆಯ ಬಡ್ಡಿದರಕ್ಕಿಂತ ಹೆಚ್ಚಿದೆ.