ಮುಂಬೈ: ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಸೋಮವಾರ ತೀವ್ರ ಕುಸಿತ ಕಂಡ ರೂಪಾಯಿ ಮೌಲ್ಯ ಕುಸಿತವಾಗಿದ್ದು, ಡಾಲರ್ ಬಲವರ್ಧನೆಗೊಂಡಿದೆ.
ವಹಿವಾಟಿನ ವಾರದ ಮೊದಲ ದಿನವೇ ಡಾಲರ್ ಎದುರು ಭಾರತೀಯ ರೂಪಾಯಿ 29 ಪೈಸೆಯಷ್ಟು ಕುಸಿತ ಕಂಡಿದ್ದು, ನಂತರ ಒಂದು ಡಾಲರ್ ದರ 83.11 ರೂ.ಗೆ ಏರಿಕೆ ಕಂಡಿದ್ದು, ಇದುವರೆಗೆ ಡಾಲರ್ ಎದುರು ಭಾರತೀಯ ಕರೆನ್ಸಿ ಅತ್ಯಂತ ಕಡಿಮೆ ಮಟ್ಟ ಇದಾಗಿದೆ.
ವಿದೇಶಿ ಸಾಂಸ್ಕೃತಿಕ ಹೂಡಿಕೆದಾರರ ಮಾರಾಟ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಬಲವರ್ಧನೆಯಿಂದ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡು ಬರುತ್ತಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.