ವಾಷಿಂಗ್ಟನ್: ಗ್ರೀನ್ ಕಾರ್ಡ್ ಮಿತಿ ರದ್ದುಗೊಳಿಸಲಾಗಿದ್ದು, ಅಮೆರಿಕ ಪ್ರವೇಶ ಮತ್ತಷ್ಟು ಸಲೀಸಾಗಲಿದೆ. ಇದರಿಂದ ಭಾರತದ ಟೆಕ್ಕಿಗಳಿಗೆ ಅನುಕೂಲವಾಗಲಿದೆ.
ಉದ್ಯೋಗ ಆಧಾರಿತ ವಲಸಿಗರಿಗೆ ಗ್ರೀನ್ ಕಾರ್ಡ್ ವಿತರಣೆ ಸಂದರ್ಭದಲ್ಲಿ ಜಾರಿಯಲ್ಲಿರುವ ದೇಶವಾರು ಮಿತಿಯನ್ನು ಮತ್ತು ಕುಟುಂಬ ಆಧಾರಿತ ವಲಸಿಗರಿಗೆ ನೀಡುವ ದೇಶವಾರು ಗ್ರೀನ್ ಕಾರ್ಡ್ ಮಿತಿಯನ್ನು ಶೇಕಡ 7 ರಿಂದ 15 ರಷ್ಟು ಹೆಚ್ಚಳ ಮಾಡಲು ಅಮೆರಿಕ ಸಂಸದೀಯ ಸಮಿತಿ ಅನುಮೋದನೆ ನೀಡಿದೆ.
ಈ ಮಸೂದೆ ಕಾಯ್ದೆ ರೂಪ ಪಡೆದುಕೊಂಡು ಜಾರಿಯಾದಲ್ಲಿ ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವ ಲಕ್ಷಾಂತರ ಟೆಕ್ಕಿಗಳಿಗೆ ಮತ್ತು ಅವರ ಕುಟುಂಬದವರಿಗೆ ಅನುಕೂಲವಾಗುತ್ತದೆ. ಅಮೆರಿಕಕ್ಕೆ ತೆರಳಲು ಗ್ರೀನ್ ಕಾರ್ಡ್ ಸಿಗಲಿದೆ ಎನ್ನಲಾಗಿದೆ.