alex Certify ಠೇವಣಿದಾರರಿಗೆ ʼನೆಮ್ಮದಿʼ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಠೇವಣಿದಾರರಿಗೆ ʼನೆಮ್ಮದಿʼ ಸುದ್ದಿ ನೀಡಿದ ಕೇಂದ್ರ ಹಣಕಾಸು ಸಚಿವೆ

ಕೇಂದ್ರ ಸಚಿವ ಸಂಪುಟದ ಪರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಹಾಗೂ ಮತ್ತೋರ್ವ ಕೇಂದ್ರ ಸಚಿವ ಎಲ್​ . ಮುರುಗನ್​​ ಇಂದು ಜಂಟಿಸುದ್ದಿಗೋಷ್ಠಿ ನಡೆಸಿದ್ರು. ಈ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಂಪುಟವು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ ಮಸೂದೆ ಹಾಗೂ ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ತಿದ್ದುಪಡಿ ಮಸೂದೆಗೆ ಸಂಪುಟ ಸಭೆಯಲ್ಲಿ ಸಮ್ಮತಿ ಸಿಕ್ಕಿರೋದಾಗಿ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಈ ತಿದ್ದುಪಡಿಯ ಬಳಿಕ ಬ್ಯಾಂಕ್​ನಲ್ಲಿ ಹಣ ಕೂಡಿಟ್ಟವರಿಗೆ ಈ ಹಿಂದೆ ಸಿಗುತ್ತಿದ್ದ 1 ಲಕ್ಷ ವಿಮೆಯನ್ನ ಇದೀಗ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುತ್ತದೆ.

ಅಂದರೆ ಯಾವುದೇ ಬ್ಯಾಂಕುಗಳು ಮೊರಟೋರಿಯಂ ಅವಧಿಯಲ್ಲಿ ಇದ್ದಾಗ ಅವರಿಗೆ ಗ್ರಾಹಕರ ವ್ಯವಹಾರವನ್ನು ನಿರ್ವಹಣೆ ಮಾಡಲು ಆಗದೇ ಹೋದ ಸಮಯದಲ್ಲಿ ಇಲ್ಲಿ ಠೇವಣಿಯನ್ನು ಇಟ್ಟ ಗ್ರಾಹಕರು ಕ್ರೆಡಿಟ್​ ಗ್ಯಾರಂಟಿ ಕಾರ್ಪೋರೇಷನ್​ ಆ್ಯಕ್ಟ್ – 1961 ತಿದ್ದುಪಡಿಯ ಮೂಲಕ 5 ಲಕ್ಷ ರೂಪಾಯಿವರೆಗೆ ವಿಮಾ ಮೊತ್ತವನ್ನು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...