ಆಧಾರ್‌ನಲ್ಲಿ ಸಾರ್ವಜನಿಕರು ಯಾವುದೇ ದಾಖಲೆ ಇಲ್ಲದೆ ಫೋಟೋ, ಮೊಬೈಲ್ ಫೋನ್ ನಂಬರ್ ಹಾಗೂ ಇ-ಮೇಲ್ ಐಡಿ ಅಪ್ ಡೇಟ್ ಮಾಡಬಹುದು.
ಇದಕ್ಕಾಗಿ ಬಯೋಮೆಟ್ರಿಕ್ ದಾಖಲೆ ಸಾಕು ಎನ್ನಲಾಗಿದ್ದು, ಇದರ ಆಧಾರದ ಮೇಲೆ ಇತರೆ ಮಾಹಿತಿಗಳನ್ನು ಅಪ್ ಡೇಟ್ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ.
ಬಯೋಮೆಟ್ರಿಕ್ ಮೂಲಕ ವ್ಯಕ್ತಿಯ ನೈಜತೆ ತಿಳಿಯುವ ಕಾರಣ ಜನ್ಮ ದಿನಾಂಕ, ವಿಳಾಸ ಸೇರಿದಂತೆ ಇತರೆ ಮಾಹಿತಿಗಳ ಅಪ್ ಡೇಟ್ ಮಾಡುವ ಸಲುವಾಗಿ ಇದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.