ಮುಂಬೈ: ಯುನೈಟೆಡ್ ಪೇಮೆಂಟ್ಸ್ ಇಂಟರ್ ಫೇಸ್(ಯುಪಿಐ) ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಪೇಮೆಂಟ್ ಗಳಿಗೆ 2.5 ರೂಪಾಯಿಯಿಂದ ಐದು ರೂಪಾಯಿವರೆಗೆ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ.
ಬಹುತೇಕ ಎಲ್ಲಾ ಖಾಸಗಿ ಬ್ಯಾಂಕುಗಳು ಐದು ರೂಪಾಯಿವರೆಗೆ ಶುಲ್ಕ ವಿಧಿಸುತ್ತಿದೆ. ಮಾಸಿಕ 20ಕ್ಕಿಂತ ಹೆಚ್ಚು ಸಲ ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ ಬಳಸಿ ಹಣ ವರ್ಗಾವಣೆ ಮಾಡಿದರೆ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. ಕಾನೂನು ಪ್ರಕಾರ ಉಚಿತವಾಗಿ ಇರಬೇಕಿದ್ದ ಸೇವೆಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ಸರ್ಕಾರ ಯುಪಿಐ ಮೂಲಕ ಪೇಮೆಂಟ್ ಉಚಿತವಾಗಿ ಮಾಡಬಹುದು ಎಂದು ಹೇಳಿದರೂ ಖಾಸಗಿ ಬ್ಯಾಂಕುಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ್ದು ಉಚಿತವಾಗಿ ನೀಡಬೇಕಿದ್ದ ಸೇವೆಗೆ ಶುಲ್ಕ ವಿಧಿಸುತ್ತವೆ ಎಂದು ಹೇಳಲಾಗಿದೆ.