alex Certify ಗ್ರಾಹಕರೇ ಗಮನಿಸಿ: ಮಾರ್ಚ್ ನಲ್ಲಿ ಸತತ 4 ದಿನ ಬಂದ್ ಆಗಲಿದೆ ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರೇ ಗಮನಿಸಿ: ಮಾರ್ಚ್ ನಲ್ಲಿ ಸತತ 4 ದಿನ ಬಂದ್ ಆಗಲಿದೆ ಬ್ಯಾಂಕ್

ಖಾಸಗೀಕರಣವನ್ನು ವಿರೋಧಿಸಿ ಸಾರ್ವಜನಿಕ ವಲಯದ ಬ್ಯಾಂಕ್ ಗಳ ನೌಕರರು ಎರಡು ದಿನಗಳ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಕಾರಣಕ್ಕೆ ಮಾರ್ಚ್ ನಲ್ಲಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಬಾಗಿಲು ಮುಚ್ಚಲಿದೆ. ಮಾರ್ಚ್ 15ರಿಂದ ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ ನಡೆಯಲಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ನಲ್ಲಿ ಮತ್ತೆರಡು ಬ್ಯಾಂಕ್ ವಿಲೀನದ ಘೋಷಣೆ ಮಾಡಿದ್ದಾರೆ. ಇದನ್ನು ವಿರೋಧಿಸಿ ಸಾರ್ವಜನಿಕ ವಲಯದ ಬ್ಯಾಂಕ್ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಮಾರ್ಚ್ 15 ಮತ್ತು 16ರಂದು ಮುಷ್ಕರದ ಕಾರಣ ಬ್ಯಾಂಕ್ ಬಂದ್ ಆಗಲಿದೆ. ಅದಕ್ಕಿಂತ ಮೊದಲು ಮಾರ್ಚ್ 13 ಎರಡನೇ ಶನಿವಾರ. ಮಾರ್ಚ್ 14 ಭಾನುವಾರವಾದ ಕಾರಣ ಬ್ಯಾಂಕ್ ಮುಚ್ಚಿರಲಿದೆ.

ಒಂಬತ್ತು ಬ್ಯಾಂಕ್ ಒಕ್ಕೂಟಗಳ ಕೇಂದ್ರ ಸಂಘಟನೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮುಷ್ಕರ ಘೋಷಿಸಿದೆ. ಖಾಸಗೀಕರಣದ ಬಗ್ಗೆ ಸಾರ್ವಜನಿಕ ವಲಯದ ಬ್ಯಾಂಕುಗಳ ಉದ್ಯೋಗಿಗಳಲ್ಲಿ ಭಯವಿದೆ. ಮಂಗಳವಾರ ಯುನೈಟೆಡದ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸಭೆ ನಡೆಸಿ ಮುಷ್ಕರದ ತೀರ್ಮಾನ ಕೈಗೊಂಡಿದೆ.

ಇದಕ್ಕೂ ಮೊದಲು ಸರ್ಕಾರ 2019 ರಲ್ಲಿ ಐಡಿಬಿಐ ಬ್ಯಾಂಕ್ ಖಾಸಗೀಕರಣಗೊಳಿಸಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ 14 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...