ಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ.
ವಾಹನಗಳ ಆರ್.ಸಿ. ಮತ್ತು ಡ್ರೈವಿಂಗ್ ಲೈಸೆನ್ಸ್ ಗಳನ್ನು ಏಕರೂಪದಲ್ಲಿ ನೀಡುವ ಹೊಸ ನಿಯಮ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಆರ್.ಸಿ. ಬುಕ್ ಮತ್ತು ಡಿಎಲ್ ಎಲೆಕ್ಟ್ರಾನಿಕ್ ರೂಪದಲ್ಲಿ ನೀಡಲಾಗುವುದು. ಕ್ಯೂಆರ್ ಕೋಡ್ ಮತ್ತು ಮೈಕ್ರೋಚಿಪ್ ಹೊಂದಿರುವ ಕಾರ್ಡುಗಳ ಮೂಲಕ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಮಾಹಿತಿಯನ್ನು ಮೋಟಾರು ವಾಹನ ಇಲಾಖೆ ಮತ್ತು ಪೊಲೀಸರು ಸುಲಭವಾಗಿ ಪಡೆಯಬಹುದಾಗಿದೆ.
ವಾಹನಗಳ ಎಲ್ಲ ದಾಖಲೆ ಮತ್ತು ಮಾಹಿತಿಗಳನ್ನು ಒಳಗೊಂಡ ಎಲೆಕ್ಟ್ರಾನಿಕ್ ವ್ಯವಸ್ಥೆ ಬರಲಿದೆ. ಅಕ್ಟೋಬರ್ 1ರಿಂದ ವಾಹನಗಳ ಆರ್.ಸಿ. ಪುಸ್ತಕ, ವಿಮೆ ಪ್ರತಿಯ ಅಸಲಿ ಪ್ರತಿ ವಾಹನದಲ್ಲಿ ಇಡುವ ಅಗತ್ಯವಿಲ್ಲ. ಎಲೆಕ್ಟ್ರಾನಿಕ್ ಪ್ರತಿಯನ್ನು ಇಟ್ಟುಕೊಂಡರೆ ಸಾಕು. ಮೋಟಾರ್ ವೆಹಿಕಲ್ ನಿಯಮಕ್ಕೆ ತಿದ್ದುಪಡಿ ತಂದಿದ್ದು ಅಕ್ಟೋಬರ್ 1ರಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.