ನವದೆಹಲಿ: ನೋಂದಣಿ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡುವುದರೊಂದಿಗೆ ಡಿಜಿಲಾಕರ್ ನೊಂದಿಗೆ OTPRMS ಪ್ರಮಾಣಪತ್ರಗಳನ್ನು ಲಿಂಕ್ ಮಾಡುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಭಾನುವಾರ ಪ್ರಕಟಿಸಿದ್ದಾರೆ.
ಆನ್ಲೈನ್ ಶಿಕ್ಷಕರ ವಿದ್ಯಾರ್ಥಿ ನೋಂದಣಿ ನಿರ್ವಹಣಾ ವ್ಯವಸ್ಥೆ – OTPRMS ಪ್ರಮಾಣ ಪತ್ರಗಳಿಗೆ ಪ್ರವೇಶ ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವಾಲಯ ಡಿಜಿಲಾಕರ್ ನೊಂದಿಗೆ ಜೋಡಣೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ನೀಡಲಾದ ಪ್ರಮಾಣಪತ್ರಗಳನ್ನು ಸ್ವಯಂ ಚಾಲಿತವಾಗಿ ಡಿಜಿಲಾಕರ್ ಗೆ ವರ್ಗಾಯಿಸಲಾಗುತ್ತದೆ. ಇದನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ https://ncte.gov.in/website/DigiLocker.aspx ವೆಬ್ಸೈಟ್ ನಲ್ಲಿ ಮತ್ತು https://digilocker.gov.in/ ನಲ್ಲಿ ಪಡೆಯಬಹುದಾಗಿದೆ. ಅಲ್ಲದೇ, ಡಿಜಿಲಾಕರ್ ಅಪ್ಲಿಕೇಶನನ್ನು ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ಗಳಲ್ಲಿಯೂ ಡೌನ್ಲೋಡ್ ಮಾಡಿಕೊಳ್ಳಬಹುದು.
ಎನ್‌ಸಿಟಿಇ ನೀಡಿದ ಒಟಿಪಿಆರ್‌ಎಂಎಸ್ ಪ್ರಮಾಣಪತ್ರಗಳನ್ನು ಪಡೆಯಲು ನೋಂದಣಿ ಶುಲ್ಕ 200 ರೂ. ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.