ಹಬ್ಬಕ್ಕೂ ಮುನ್ನ ತನ್ನ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಬಂಪರ್ ಸುದ್ದಿ ನೀಡಿದೆ. ಬೋನಸ್ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ವಿಷಯ ತಿಳಿಸಿದ್ದು, 2019-20 ನೇ ಸಾಲಿಗೆ ಬೋನಸ್ ನೀಡಲು ಅನುಮೋದನೆ ನೀಡಲಾಗಿದೆ. ಇದರಿಂದಾಗಿ 30 ಲಕ್ಷಕ್ಕೂ ಅಧಿಕ ಕೇಂದ್ರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಉತ್ಪಾದನಾ ಸಂಬಂಧಿತ ಬೋನಸ್ ಮತ್ತು ಉತ್ಪಾದಕತೆ ರಹಿತ ಲಿಂಕ್ ಬೋನಸ್ ಅನ್ನು ಅನುಮೋದಿಸಲಾಗಿದ್ದು, ಸರ್ಕಾರಕ್ಕೆ ಒಟ್ಟು 3,737 ಕೋಟಿ ರೂ.ವೆಚ್ಚವಾಗಲಿದೆ.