ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್ ಮಂಡನೆ ಮಾಡ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಬಜೆಟ್ ಘೋಷಣೆಯಾಗ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಬಜೆಟ್ ಭಾಷಣದ ಸಮಯದಲ್ಲಿ ಸೆನ್ಸೆಕ್ಸ್ 737.25 ಪಾಯಿಂಟ್‌ಗಳ ಏರಿಕೆಯೊಂದಿಗೆ 47,023.02 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಸೂಚ್ಯಂಕವು 205.40 ಪಾಯಿಂಟ್‌ಗಳ ಏರಿಕೆಯೊಂದಿಗೆ 13,840.00 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
BIG BREAKING: ಬ್ಯಾಂಕ್ ಠೇವಣಿದಾರರಿಗೆ ಕೇಂದ್ರ ಬಜೆಟ್ ನಲ್ಲಿ ‘ನೆಮ್ಮದಿ’ ಸುದ್ದಿ
ನಿರ್ಮಲಾ ಸೀತಾರಾಮನ್ ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಶುರು ಮಾಡಿದ್ದಾರೆ. ಬಜೆಟ್ ಮಂಡನೆಗೂ ಮುನ್ನವೂ ಷೇರು ಮಾಡುಕಟ್ಟೆಯಲ್ಲಿ ಏರಿಕೆ ಕಂಡು ಬಂದಿತ್ತು. ಸೆನ್ಸೆಕ್ಸ್ 527.47 ಪಾಯಿಂಟ್‌ಗಳ ಲಾಭದೊಂದಿಗೆ 46,833.91 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 134.25 ಲಾಭದೊಂದಿಗೆ 13,767.35ರಲ್ಲಿ ವಹಿವಾಟು ನಡೆಸುತ್ತಿತ್ತು.
ಬಜೆಟ್ ಗೂ ಮುನ್ನ ರೂಪಾಯಿ ಮೌಲ್ಯದಲ್ಲೂ ಏರಿಕೆ ಕಂಡು ಬಂದಿದೆ. ಡಾಲರ್ ಎದುರು 6 ಪೈಸೆ ಏರಿಕೆ ಕಂಡ ರೂಪಾಯಿ ಮೌಲ್ಯ 72.89 ರೂಪಾಯಿಯಾಗಿದೆ.