ಮೋದಿ ಸರ್ಕಾರ 2.0 ನೇತೃತ್ವದಲ್ಲಿ ಮಂಡಿಸಲಾದ ಮೂರನೇ ಬಜೆಟ್ನಲ್ಲಿ ವಾಹನ ಕ್ಷೇತ್ರದಲ್ಲಿ ಕೆಲ ಮಹತ್ವದ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಬಜೆಟ್ 2021ರಲ್ಲಿ ಹೊಸ ಸ್ಕ್ರಾಪೇಜ್ ನೀತಿ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಳೆಯ ವಾಹನಗಳನ್ನ ಗುಜರಿಗೆ ಹಾಕಿ ಎಂದು ಕರೆ ನೀಡಿದ್ರು.
ಕೇಂದ್ರ ಬಜೆಟ್ 2021: ರೈಲ್ವೆ ಇಲಾಖೆಗೆ ಬರೋಬ್ಬರಿ 1.10 ಲಕ್ಷ ಕೋಟಿ ರೂ. ಮೀಸಲು
20 ವರ್ಷದಷ್ಟು ಹಳೆಯದಾದ ಖಾಸಗಿ ವಾಹನ ಹಾಗೂ 15 ವರ್ಷದಷ್ಟು ಹಳೆಯದಾದ ವಾಣಿಜ್ಯ ವಾಹನಗಳು ಇನ್ಮುಂದೆ ಗುಜರಿ ಸೇರಲಿವೆ. ಜನರು ಸ್ವಯಂಪ್ರೇರಿತರಾಗಿ ಹಳೆಯ ವಾಹನಗಳನ್ನ ಗುಜರಿಗೆ ಹಾಕಲು ಪ್ರೇರಣೆ ನೀಡಲಾಗುವುದು.
ವಾಹನ ಉದ್ಯಮ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ನಿಟ್ಟಿನಲ್ಲಿ ಹಳೆಯ ವಾಹನಗಳು ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿವೆ ಎಂದು ಹೇಳಿದ್ರು.