ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹಳೆಯ ವಾಹನಗಳನ್ನು ಸ್ವಯಂ ಪ್ರೇರಣೆಯಿಂದ ಸ್ಕ್ರ‍್ಯಾಪಿಂಗ್ ಮಾಡುವ ನೀತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ.
ಈ ನೀತಿಯ ಅಡಿ, ಖರೀದಿ ಮಾಡಿದ 20 ವರ್ಷಗಳ ಬಳಿಕ ಹಾಗೂ ವಾಣಿಜ್ಯ ವಾಹನಗಳು 15 ವರ್ಷಗಳ ಬಳಿಕ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿವೆ.
‘ಬಜೆಟ್’ ಮರು ದಿನವೇ ಗ್ರಾಹಕರಿಗೆ ಬಿಗ್ ಶಾಕ್: ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ
ಕೇಂದ್ರದ ಈ ನಡೆಯನ್ನು ಸ್ವಾಗತಿಸಿರುವ ಭಾರತೀಯ ಆಟೋಮೊಬೈಲ್ ಉತ್ಪಾದಕರ ಸಂಘಟನೆ ಅಧ್ಯಕ್ಷ ಕೈಂಚಿ ಅಯುಕಾವಾ, ಹೊಸ ನೀತಿ ಒಳ್ಳೆಯ ಉದ್ದೇಶವನ್ನೇ ಹೊಂದಿದ್ದು, ಸರ್ಕಾರದ ಈ ನಡೆಯ ಮೂಲಕ ಪರ್ಯಾವರಣ ಹಾಗೂ ಸಮಾಜಕ್ಕೆ ಸಾಕಷ್ಟು ಲಾಭಗಳಾಗಲಿವೆ ಎಂದಿದ್ದಾರೆ.
ಇದೇ ಮಾತುಗಳನ್ನು ಮರ್ಸಿಡಿಸ್ ಬೆಂಜ್ ಇಂಡಿಯಾ ಸಿಇಓ ಮಾರ್ಟಿನ ಶ್ವೆಂಕ್ ಸಹ ಪ್ರತಿಧ್ವನಿಸಿದ್ದು, “ಸ್ಕ್ರ‍್ಯಾಪಿಂಗ್ ನೀತಿಯ ಮೂಲಕ ಸಕಾರಾತ್ಮಕ ನಡೆಯೊಂದನ್ನ ನೋಡುವುದು ಸಂತಸದ ವಿಷಯ. ಬಂಡವಾಳ ವೆಚ್ಚವು ಆಟೋಮೊಬೈಲ್ ಕೈಗಾರಿಕೆಗೆ ಪರೋಕ್ಷವಾಗಿ ನೆರವಾಗಲಿದೆ ಎಂದು ನಿರೀಕ್ಷಿಸುತ್ತೇವೆ” ಎಂದು ತಿಳಿಸಿದ್ದಾರೆ.