ಬೆಂಗಳೂರು: ಆಹಾರಧಾನ್ಯ ಉದ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಾಗಿದ್ದು, 2027 ರೊಳಗೆ ಬೇಳೆ ಆಮದು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ತಿಳಿಸಿದ್ದಾರೆ.
ಹೆಸರಘಟ್ಟದಲ್ಲಿ ಮಾತನಾಡಿದ ಅವರು, ಕೃಷಿ ಆರ್ಥಿಕತೆಯಲ್ಲಿ ತೋಟಗಾರಿಕೆ ಕ್ಷೇತ್ರದ ಕೊಡುಗೆ ಶೇಕಡ 33 ರಷ್ಟು ಇದ್ದುಮ ಇದನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಇದರಿಂದ ದೇಶಿಯ ಮಾರುಕಟ್ಟೆ ಮಾತ್ರವಲ್ಲ, ಜಾಗತಿಕ ಮಾರುಕಟ್ಟೆಯಲ್ಲಿಯೂ ಅಸ್ತಿತ್ವ ಸ್ಥಾಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ತೋಟಗಾರಿಕಾ ಉತ್ಪಾದನೆ ಗಣನೀವಾಗಿ ಹೆಚ್ಚಳ ಕಂಡಿದ್ದು, 2022- 23 ರಲ್ಲಿ 150 ಮಿಲಿಯನ್ ಟನ್ ತಲುಪಿದೆ. ತೋಟಗಾರಿಕೆ ಕ್ಷೇತ್ರವನ್ನು ದೇಶದ ಆರ್ಥಿಕತೆಯ ಪ್ರಮುಖ ಅಂಶವಾಗಿ ಪರಿಗಣಿಸಲಾಗಿದೆ. ರೈತರು ಆ ಜಾಗತಿಕ ಗುಣಮಟ್ಟಕ್ಕೆ ಸಮನಾಗಿ ಉತ್ಪಾದನೆ ಮಾಡಿದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ರೈತರನ್ನು ಪ್ರಯೋಗಾಲಯಗಳಿಗೆ ಕರೆ ತರುವ ಕೆಲಸವಾಗಬೇಕು ಎಂದು ಹೇಳಿದ್ದಾರೆ.