ನವದೆಹಲಿ: ಕೊರೋನಾ ಕಾರಣದಿಂದಾಗಿ ಕೆಲಸ ಕಳೆದುಕೊಂಡವರಿಗೆ ನಿರುದ್ಯೋಗ ಸೌಲಭ್ಯ ಪಡೆಯಲು ಅಗತ್ಯ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.
ನೌಕರರ ರಾಜ್ಯ ವಿಮಾ ನಿಗಮ(ESIC) ನಿರುದ್ಯೋಗ ಸೌಲಭ್ಯ ಪಡೆಯಲು ಅಗತ್ಯವಾದ ನಿಯಮಗಳನ್ನು ಸಡಿಲಿಕೆ ಮಾಡಿದೆ. ಸೌಲಭ್ಯ ಪಡೆಯ ಬಯಸುವವರು ಅಫಿಡವಿಟ್ ಸಲ್ಲಿಕೆ ಮಾಡುವ ಅಗತ್ಯ ಇರುವುದಿಲ್ಲ.
ನೌಕರರ ರಾಜ್ಯ ವಿಮಾ ನಿಗಮದ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ ಅನ್ವಯ ಅಫಿಡವಿಟ್ ಸಲ್ಲಿಕೆ ಮಾಡಬೇಕಿಲ್ಲ ಎಂದು ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ. ನಿಗಮದ ಸಭೆಯಲ್ಲಿ 2020 ರ ಜುಲೈ 1 ರಿಂದ 2021 ರ ಜೂನ್ 30 ರವರೆಗೆ ಯೋಜನೆಯನ್ನು ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇದರೊಂದಿಗೆ ಪರಿಹಾರ ಪ್ರಮಾಣವನ್ನು ಸರಾಸರಿ ದೈನಂದಿನ ಆದಾಯದ ಶೇಕಡ 25 ರಿಂದ ಶೇಕಡ 50 ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.