ನವದೆಹಲಿ: ನಿಗದಿಗಿಂತ ಹೆಚ್ಚು ಸಲ ಕರೆಂಟ್ ತೆಗೆದರೆ ಗ್ರಾಹಕರಿಗೆ ಪರಿಹಾರ ನೀಡಲಾಗುವುದು. ವಿದ್ಯುತ್ ಗ್ರಾಹಕರ ಹಕ್ಕು ರಕ್ಷಣೆಗೆ ಕೇಂದ್ರ ಸರ್ಕಾರ ನಿಯಮ ರೂಪಿಸಿದೆ.
ನಿಯಮದ ಪ್ರಕಾರ 30 ದಿನಗಳ ಒಳಗೆ ವಿದ್ಯುತ್ ಸಂಪರ್ಕ ನೀಡುವುದು ಕಡ್ಡಾಯವಾಗಿದೆ. ವಿದ್ಯುತ್ ವಿತರಣೆ ಕಂಪನಿಗಳು ಗ್ರಾಹಕರನ್ನು ಶೋಷಿಸಿ ಬೇಕಾಬಿಟ್ಟಿ ಸೇವೆ ನೀಡುತ್ತವೆ. ಪದೇಪದೇ ವಿದ್ಯುತ್ ಕಡಿತಗೊಳಿಸುತ್ತದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಗ್ರಾಹಕರ ಹಕ್ಕು ರಕ್ಷಿಸಲು ಹೊಸ ನಿಯಮಾವಳಿ ಬಿಡುಗಡೆ ಮಾಡಿದೆ.
ನಿಗದಿಗಿಂತ ಹೆಚ್ಚು ಸಲ ಕರೆಂಟ್ ತೆಗೆದರೆ ಗ್ರಾಹಕರಿಗೆ ದಂಡದ ರೂಪದಲ್ಲಿ ಪರಿಹಾರ ಕೊಡಬೇಕಿದೆ. ವಿದ್ಯುತ್ ನಿಲುಗಡೆ ಸಮಯ ನಿಗದಿ ಮಾಡುವ ಬಗ್ಗೆ ಆಯೋಗಗಳು ನಿರ್ಧರಿಸಬೇಕು. ಎಲ್ಲ ಗ್ರಾಹಕರಿಗೂ ವಿದ್ಯುತ್ ಕಡಿತಗೊಳಿಸುವ ಮೊದಲು ಎಸ್ಎಂಎಸ್ ಮೊದಲಾದ ವಿಧಾನಗಳ ಮೂಲಕ ಸಂದೇಶ ಕಳುಹಿಸಬೇಕು.
ಹಿರಿಯ ನಾಗರಿಕರಿಗೆ ಬಿಲ್ ಪಾವತಿ ಮೊದಲಾದ ಸೇವೆ ಮನೆಬಾಗಿಲಿಗೆ ಕಲ್ಪಿಸಬೇಕು. 24 ಗಂಟೆ ಉಚಿತ ಕಾಲ್ ಸೆಂಟರ್, ವೆಬ್ಸೈಟ್, ಅಪ್ಲಿಕೇಶನ್, ಕೇಂದ್ರೀಕೃತ ದೂರವಾಣಿಸಂಖ್ಯೆ ಹೊಂದಿರಬೇಕು. ಗ್ರಾಹಕರ ದೂರುಗಳನ್ನು 45 ದಿನಗಳ ಒಳಗೆ ಪರಿಹರಿಸಬೇಕು ಎಂದು ತಿಳಿಸಲಾಗಿದೆ.