ಡೆಮೆಕ್ ಡೊನಾಲ್ಡ್ಸ್, ಸ್ಟಾರ್ ಬಕ್ಸ್, ಕೋಕಾ-ಕೋಲಾ, ಪೆಪ್ಸಿಕೋ ಮತ್ತು ಜನರಲ್ ಎಲೆಕ್ಟ್ರಿಕ್ ನಂತಹ ಜಾಗತಿಕ ಬ್ರಾಂಡ್ ಗಳು ರಷ್ಯಾದಲ್ಲಿ ವ್ಯಾಪಾರ ಸ್ಥಗಿತಗೊಳಿಸಿವೆ.
ಯುಎಸ್ ಕಾರ್ಪೊರೇಟ್ ಶಕ್ತಿಗಳಾಗಿರುವ ಈ ಜಾಗತಿಕ ಕಂಪನಿಗಳು ಉಕ್ರೇನ್ ದೇಶದ ಮೇಲೆ ರಷ್ಯಾ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾದಲ್ಲಿ ತಮ್ಮ ವ್ಯವಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.
ಉಕ್ರೇನ್‌ನಲ್ಲಿ ಅನಾವಶ್ಯಕವಾದ ಮಾನವ ಸಂಕಟಗಳನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ ಎಂದು ಮೆಕ್ ಡೊನಾಲ್ಡ್ಸ್ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ ಕೆಂಪ್‌ಜಿನ್ಸ್ಕಿ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಚಿಕಾಗೋ ಮೂಲದ ಬರ್ಗರ್ ದೈತ್ಯ ಮೆಕ್ ಡೊನಾಲ್ಡ್ ರಷ್ಯಾದ 850 ಮಳಿಗೆಗಳನ್ನು ಮುಚ್ಚುವುದಾಗಿ ಹೇಳಿದೆ. ಆದರೆ ನಮ್ಮ ಮೆಕ್ ಡೊನಾಲ್ಡ್ಸ್ ಬ್ರ್ಯಾಂಡ್ ಗೆ ತಮ್ಮ ಹೃದಯ ಮತ್ತು ಆತ್ಮ ಅರ್ಪಿಸಿ ದುಡಿದ ರಷ್ಯಾದಲ್ಲಿ ತನ್ನ 62,000 ಉದ್ಯೋಗಿಗಳಿಗೆ ವೇತನ ಪಾವತಿಸುವುದನ್ನು ಮುಂದುವರಿಸುತ್ತದೆ. ಕಂಪನಿಯು ತನ್ನ ಮಳಿಗೆಗಳನ್ನು ಯಾವಾಗ ಮತ್ತೆ ತೆರೆಯಲು ಸಾಧ್ಯವಾಗುತ್ತದೆ ಎಂದು ತಿಳಿಯುವುದು ಅಸಾಧ್ಯ ಎಂದು ಕೆಂಪ್ ಜಿನ್ಸ್ಕಿ ಹೇಳಿದರು.
ನಮ್ಮಂತಹ ಜಾಗತಿಕ ಬ್ರ್ಯಾಂಡ್ ಗೆ ಪರಿಸ್ಥಿತಿಯು ಅಸಾಧಾರಣವಾಗಿ ಸವಾಲಾಗಿದೆ. ಮೆಕ್ ಡೊನಾಲ್ಡ್ಸ್ ನೂರಾರು ರಷ್ಯಾದ ಪೂರೈಕೆದಾರರೊಂದಿಗೆ ಕೆಲಸ ಮಾಡುತ್ತದೆ, ಪ್ರತಿದಿನ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. ಈಗ ತಾತ್ಕಾಲಿಕವಾಗಿ ಮಳಿಗೆಗಳನ್ನು ಮುಚ್ಚಲಾಗಿದೆ. ಯಾವಾಗ ತೆರೆಯುತ್ತೇವೆ ಎಂಬುದನ್ನು ಹೇಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಶುಕ್ರವಾರ, ಸ್ಟಾರ್ ಬಕ್ಸ್ ತನ್ನ 130 ರಷ್ಯಾದ ಮಳಿಗೆಗಳಿಂದ ಲಾಭವನ್ನು ಉಕ್ರೇನ್‌ನಲ್ಲಿ ಮಾನವೀಯ ಪರಿಹಾರ ಪ್ರಯತ್ನಗಳಿಗೆ ಬಳಸುವುದಾಗಿ ಹೇಳಿದೆ. ಕುವೈತ್ ಮೂಲದ ಫ್ರಾಂಚೈಸಿ ಅಲ್ಶಯಾ ಗ್ರೂಪ್ ಒಡೆತನದಲ್ಲಿದೆ. ಆದರೆ ಮಂಗಳವಾರ, ಕಂಪನಿಯು ತನ್ನ ಮಾರ್ಗ ಬದಲಾಯಿಸಿ ತಾತ್ಕಾಲಿಕವಾಗಿ ಆ ಅಂಗಡಿಗಳನ್ನು ಮುಚ್ಚುವುದಾಗಿ ಹೇಳಿದೆ. ಅಲ್ಶಯಾ ಗ್ರೂಪ್ ಸ್ಟಾರ್ ಬಕ್ಸ್‌ನ 2,000 ರಷ್ಯಾದ ಉದ್ಯೋಗಿಗಳಿಗೆ ವೇತನ ಪಾವತಿಸುವುದನ್ನು ಮುಂದುವರಿಸುತ್ತದೆ ಎಂದು ಸ್ಟಾರ್‌ಬಕ್ಸ್ ಅಧ್ಯಕ್ಷ ಮತ್ತು ಸಿಇಒ ಕೆವಿನ್ ಜಾನ್ಸನ್ ತಿಳಿಸಿದ್ದಾರೆ.
ಕೋಕಾ-ಕೋಲಾ ಕಂಪನಿಯು ರಷ್ಯಾದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ, ಕೋಕ್ ನ ಪಾಲುದಾರ, ಸ್ವಿಟ್ಜರ್ಲೆಂಡ್ ಮೂಲದ ಕೋಕಾ-ಕೋಲಾ ಹೆಲೆನಿಕ್ ಬಾಟ್ಲಿಂಗ್ ಕಂ., ರಷ್ಯಾದಲ್ಲಿ 10 ಬಾಟ್ಲಿಂಗ್ ಪ್ಲಾಂಟ್‌ಗಳನ್ನು ಹೊಂದಿದೆ, ಇದು ಅದರ ಅತಿದೊಡ್ಡ ಮಾರುಕಟ್ಟೆಯಾಗಿದೆ. ಕೋಕಾ-ಕೋಲಾ ಹೆಲೆನಿಕ್ ಬಾಟ್ಲಿಂಗ್ ಕಂ ಪೆಪ್ಸಿಕೋ ಮತ್ತು ಜನರಲ್ ಎಲೆಕ್ಟ್ರಿಕ್‌ನಲ್ಲಿ ಕೋಕ್ 21 ಪ್ರತಿಶತ ಪಾಲನ್ನು ಹೊಂದಿದೆ. ನ್ಯೂಯಾರ್ಕ್ ನ ಪರ್ಚೇಸ್ ಮೂಲದ ಪೆಪ್ಸಿ, ರಷ್ಯಾದಲ್ಲಿ ಪಾನೀಯಗಳ ಮಾರಾಟ ಸ್ಥಗಿತಗೊಳಿಸುವುದಾಗಿ ಹೇಳಿದೆ. ಇದು ಯಾವುದೇ ಬಂಡವಾಳ ಹೂಡಿಕೆಗಳು ಮತ್ತು ಪ್ರಚಾರ ಚಟುವಟಿಕೆಗಳನ್ನು ಸಹ ಸ್ಥಗಿತಗೊಳಿಸುತ್ತದೆ ಎಂದು ಹೇಳಲಾಗಿದೆ.
ಆದರೆ, ಕಂಪನಿಯು ತನ್ನ 20,000 ರಷ್ಯಾದ ಉದ್ಯೋಗಿಗಳಿಗೆ ಮತ್ತು ಅದರ ಪೂರೈಕೆ ಸರಪಳಿಯ ಭಾಗವಾಗಿರುವ 40,000 ರಷ್ಯಾದ ಕೃಷಿ ಕಾರ್ಮಿಕರಿಗೆ ಬೆಂಬಲ ನೀಡುವುದನ್ನು ಮುಂದುವರಿಸಲು ಹಾಲು, ಬೇಬಿ ಫಾರ್ಮುಲಾ ಮತ್ತು ಮಗುವಿನ ಆಹಾರವನ್ನು ಉತ್ಪಾದಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ. ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ನಾವು ನಮ್ಮ ವ್ಯವಹಾರದ ಮಾನವೀಯ ಅಂಶಕ್ಕೆ ಒತ್ತು ನೀಡಬೇಕು ಎಂದು ಪೆಪ್ಸಿಕೋ ಸಿಇಒ ರಾಮನ್ ಲಾಗ್ವಾರ್ಟಾ ಉದ್ಯೋಗಿಗಳಿಗೆ ಇಮೇಲ್‌ನಲ್ಲಿ ತಿಳಿಸಿದ್ದಾರೆ.
ಜನರಲ್ ಎಲೆಕ್ಟ್ರಿಕ್ ಟ್ವಿಟರ್ ಪೋಸ್ಟ್ ನಲ್ಲಿ ರಷ್ಯಾದಲ್ಲಿ ತನ್ನ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸುತ್ತಿದೆ ಎಂದು ಹೇಳಿದೆ. ಅಗತ್ಯ ವೈದ್ಯಕೀಯ ಉಪಕರಣಗಳು ಮತ್ತು ರಷ್ಯಾದಲ್ಲಿ ಅಸ್ತಿತ್ವದಲ್ಲಿರುವ ವಿದ್ಯುತ್ ಸೇವೆಗಳಿಗೆ ಮಾತ್ರ ಸಹಕಾರ ನೀಡುವುದಾಗಿ ಹೇಳಿದೆ.
ಯುದ್ಧದಿಂದ ಮೆಕ್ ಡೊನಾಲ್ಡ್ಸ್ ಗೆ ಅತಿ ದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ. ಸ್ಟಾರ್ ಬಕ್ಸ್ ಮತ್ತು ಇತರ ಫಾಸ್ಟ್ ಫುಡ್ ಕಂಪನಿಗಳಾದ KFC ಮತ್ತು ಪಿಜ್ಜಾ ಹಟ್ ಗಿಂತ ಭಿನ್ನವಾಗಿ, ರಷ್ಯಾದ ಸ್ಥಳಗಳು ಫ್ರಾಂಚೈಸಿಗಳು ಮೆಕ್ ಡೊನಾಲ್ಡ್ ಒಡೆತನದಲ್ಲಿದೆ, ಮೆಕ್ ಡೊನಾಲ್ಡ್ಸ್ ಉಕ್ರೇನ್ ನಲ್ಲಿ ತನ್ನ ಮಾಲೀಕತ್ವದ 108 ರೆಸ್ಟೋರೆಂಟ್ ಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಉದ್ಯೋಗಿಗಳಿಗೆ ವೇತನ ಪಾವತಿಸುವುದನ್ನು ಮುಂದುವರೆಸಿದೆ.