ಕೋವಿಡ್ ವಿರುದ್ಧದ ಲಸಿಕೆಯಾದ ಫೀಜರ್ಗೆ ಬ್ರಿಟನ್ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಈ ಮೂಲಕ ಕೊರೊನಾ ಲಸಿಕೆಗೆ ಔಪಚಾರಿಕ ಅನುಮೋದನೆ ನೀಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್ ಪಾತ್ರವಾಗಿದೆ.
ಫಿಜರ್ ಬಯೋಟೆಕ್ ಲಸಿಕೆಗೆ ಬ್ರಿಟನ್ನ ಔಷಧಿ ಹಾಗೂ ಆರೋಗ್ಯ ನಿಯಂತ್ರಣ ಸಂಸ್ಥೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಪ್ರಯೋಗದ ವೇಳೆ 95 ಶೇಕಡಾ ಪರಿಣಾಮಕಾರಿ ಎಂದು ಸಾಬೀತುಪಡಿಸಿದ ಫಿಜರ್ ಮುಂದಿನ ವಾರದಿಂದ ಬಳಕೆಗೆ ಲಭ್ಯವಿರಲಿದೆ.
ಮುಂದಿನ ವಾರದಿಂದ ಬ್ರಿಟನ್ನಲ್ಲಿ ಕೊರೊನಾ ಲಸಿಕೆ ಸಿಗಲಿದೆ. ಈ ಲಸಿಕೆ ಮೂಲಕ ನಮ್ಮ ಜೀವನವನ್ನ ಪುನರ್ಸ್ಥಾಪಿಸುತ್ತೇವೆ ಅಂತಾ ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.