ಮನೆ ಬದಲಾವಣೆ ಮಾಡ್ತಿದ್ದಂತೆ ಆಧಾರ್ ಕಾರ್ಡ್ ನಲ್ಲಿ ಮನೆ ವಿಳಾಸ ಬದಲಾವಣೆ ಮಾಡಬೇಕು. ಇದು ಬಾಡಿಗೆ ಮನೆ ಪಡೆಯುವವರಿಗೆ ತಲೆ ಬಿಸಿ ಕೆಲಸ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಯುಐಡಿಎಐ, ಜನರ ಕೆಲಸ ಸುಲಭ ಮಾಡಿದೆ. ಮನೆ ವಿಳಾಸವನ್ನು ಇನ್ಮುಂದೆ ಸುಲಭವಾಗಿ ಬದಲಿಸಬಹುದು.
ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಾಯಿಸಲು ಬಾಡಿಗೆ ಅಗ್ರಿಮೆಂಟ್ ಮಾಡಬೇಕು. ಈ ಬಾಡಿಗೆ ಒಪ್ಪಂದದಲ್ಲಿ ನಿಮ್ಮ ಹೆಸರನ್ನು ಬರೆಯಬೇಕು. ಇದರ ನಂತರ ಬಾಡಿಗೆ ಒಪ್ಪಂದವನ್ನು ಸ್ಕ್ಯಾನ್ ಮಾಡಿ ಪಿಡಿಎಫ್ ಆಗಿ ಪರಿವರ್ತಿಸಬೇಕಾಗುತ್ತದೆ. ನಂತರ ಈ ಪಿಡಿಎಫ್ ನ್ನ ಆಧಾರ್ ವೆಬ್‌ಸೈಟ್‌ನಲ್ಲಿ ನವೀಕರಿಸಬೇಕಾಗುತ್ತದೆ.
ಆಧಾರ್ ಕಾರ್ಡ್ ನಲ್ಲಿ ವಿಳಾಸ ನವೀಕರಿಸಲು ಮೊದಲು https://uidai.gov.in/ ಗೆ ಹೋಗಬೇಕು. ಮುಖಪುಟದಲ್ಲಿ ವಿಳಾಸ ನವೀಕರಣ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಲಾಗಿನ್ ಆಗಬೇಕು. ನಿಮ್ಮ ಮೊಬೈಲ್ ಗೆ ಒಟಿಪಿ ನಂಬರ್ ಬರಲಿದೆ. ಅದನ್ನು ಹಾಕಬೇಕು. ನಂತ್ರ ವಿಳಾಸ ನವೀಕರಿಸಬೇಕು.
ನೀವು ಬಯಸಿದ್ರೆ ಆಧಾರ್ ಕೇಂದ್ರಕ್ಕೆ ಹೋಗಿ ಕೂಡ ವಿಳಾಸ ನವೀಕರಿಸಬಹುದು. ವೆಬ್ಸೈಟ್ ನಲ್ಲಿ ಆಧಾರ್ ವಿಳಾಸ ನವೀಕರಣ ಫಾರ್ಮ್ ಡೌನ್ಲೋಡ್ ಮಾಡಬೇಕು. ನಂತ್ರ ಫಾರ್ಮ್ ಭರ್ತಿ ಮಾಡಿ, ದಾಖಲೆ ಸಮೇತ ಆಧಾರ್ ಕೇಂದ್ರಕ್ಕೆ ನೀಡಬೇಕು.