alex Certify BIG NEWS:‌ ಹಬ್ಬದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಖರೀದಿಸುವವರಿಗೆ ಬಂಪರ್‌ ಆಫರ್‌ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಹಬ್ಬದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಖರೀದಿಸುವವರಿಗೆ ಬಂಪರ್‌ ಆಫರ್‌ – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರನ್ನ ಸೆಳೆಯಲು ಮುಂದಾಗಿರುವ ದ್ವಿಚಕ್ರ ವಾಹನ ಕಂಪನಿಗಳು ತರಹೇವಾರಿ ಆಫರ್​ಗಳನ್ನ ನೀಡೋಕೆ ಮುಂದಾಗಿದೆ. ದ್ವಿಚಕ್ರ ವಾಹನ ಮಾರಾಟ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ, ಬಜಾಜ್ , ಯಮಹ, ಹೀರೋ ಮೋಟರ್​ಕಾಪ್​ಗಳು ತಮ್ಮ ಗ್ರಾಹಕರಿಗೆ ದರ ರಿಯಾಯಿತಿ, ಎಕ್ಸ್​ಚೇಂಜ್​ ಬೋನಸ್​ನಂತಹ ವಿವಿಧ ಆಫರ್​ಗಳನ್ನ ನೀಡಿವೆ.

ಹೋಂಡಾ ಕಂಪನಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಸೂಪರ್​ ಸಿಕ್ಸ್​ ಆಫರ್​ ನೀಡಿದೆ. ಇದರಡಿಯಲ್ಲಿ ಹೋಂಡಾ ಗ್ರಾಹಕರು 11 ಸಾವಿರ ರೂಪಾಯಿ ಉಳಿಸಬಹುದಾಗಿದೆ. ಈ ಆಫರ್​ನಲ್ಲಿ ಗ್ರಾಹಕರಿಗೆ ಬೈಕ್​ ಲೋನ್ ​ನ ಮೊದಲ ಮೂರು ತಿಂಗಳ ಇಎಂಐನಲ್ಲಿ 50 ಪ್ರತಿಶತ ರಿಯಾಯಿತಿ ಸಿಗಲಿದೆ.

ಬಜಾಜ್​ ಕಂಪನಿ ಹಬ್ಬದ ವಿಶೇಷವಾಗಿ ತನ್ನ ಪ್ಲಾಟಿನಾ 110 ಬೈಕ್​ಗೆ ಕೇವಲ 7226 ರೂ. ಡೌನ್​ ಪೇಮೆಂಟ್​ಗೆ ಅವಕಾಶ ನೀಡಿದೆ. ಗ್ರಾಹಕರು ಈ ಆಫರ್​ನಿಂದ 2800 ರೂಪಾಯಿಗಳನ್ನ ಉಳಿಕೆ ಮಾಡಬಹುದಾಗಿದೆ. ಬಜಾಜ್​ ಪಲ್ಸರ್​ 125 ಸಿಸಿ ಸಿಂಗಲ್​ ಸೀಟ್ ಬೈಕ್​ಗಳು 69,174 ರೂಪಾಯಿಗೆ ಲಭ್ಯವಿದೆ. ಈ ಹಿಂದೆ ಇದೇ ಬೈಕ್​​ಗೆ 71,674 ರೂಪಾಯಿ ಬೆಲೆ ನಿಗದಿ ಮಾಡಲಾಗಿತ್ತು. ಈ ಹೊಸ ಆಫರ್​ ಅಕ್ಟೋಬರ್​ 31ರವರೆಗೆ ಲಭ್ಯವಿದೆ.

ಯಮಹ 125 ಸಿಸಿ ಬೈಕ್​​ಗಳಿಗೆ ಆಫರ್​ಗಳನ್ನ ನೀಡಿದೆ. 125 ಸಿಸಿ ಬೈಕ್​ಗಳನ್ನ ಖರೀದಿಸಿದ ಗ್ರಾಹಕರಿಗೆ 5000 ರೂಪಾಯಿಯ ಗಿಫ್ಟ್​ ವೋಚರ್​ ಸಿಗಲಿದೆ. ಹಾಗೂ ಈ ಬೈಕ್​ಗಳಿಗೆ ಡೌನ್​ಪೇಮೆಂಟ್​ ಆಗಿ 6000 ರೂಪಾಯಿಯನ್ನ ನಿಗದಿ ಮಾಡಿದೆ.

ಹೀರೋ ಮೊಟೋಕಾರ್ಪ್​ ತನ್ನ ಗ್ರಾಹಕರಿಗೆ ಹಬ್ಬದ ಪ್ರಯುಕ್ತ 7000 ರೂಪಾಯಿಗಳ ವಿವಿಧ ರಿಯಾಯಿತಿ ನೀಡಿದೆ. ಬೈಕ್​ಗಳ ಡೌನ್​ಪೇಮೆಂಟ್​​ನಲ್ಲಿ ಗ್ರಾಹಕರಿಗೆ 6.99 ಪ್ರತಿಶತ ರಿಯಾಯಿತಿ ನೀಡಿದೆ. ಇದರನ್ವಯ​ ಶೋರೂಂಗಳಲ್ಲಿ ಯಾವುದೇ ಬೈಕ್​​ಗಳನ್ನ 4999 ರೂಪಾಯಿ ಡೌನ್​ಪೇಮೆಂಟ್​ನಲ್ಲಿ ಖರೀದಿ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...