ಜನಪ್ರಿಯ ಜಾಲತಾಣ ಟ್ವಿಟರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಪ್ರಕಾರ ಗುರುವಾರ ಜಗತ್ತಿನಾದ್ಯಂತ ಸಾವಿರಾರು ಬಳಕೆದಾರರಿಗೆ Twitter Inc ಸ್ಥಗಿತಗೊಂಡಿದೆ.
ಯುನೈಟೆಡ್ ಸ್ಟೇಟ್ಸ್ ನಲ್ಲಿ 27,000 ಕ್ಕೂ ಹೆಚ್ಚು ಜನರು ಟ್ವಿಟರ್ ನೊಂದಿಗೆ ಸಮಸ್ಯೆಗಳಾದ ಬಗ್ಗೆ ವರದಿ ಮಾಡಿದ್ದಾರೆ. ಡೌನ್‌ಡೆಕ್ಟರ್ ಪ್ರಕಾರ ಇದು ಹಲವಾರು ಮೂಲಗಳಿಂದ ವರದಿಗಳನ್ನು ಒಟ್ಟುಗೂಡಿಸುವ ಮೂಲಕ ಟ್ವಿಟರ್ ಸ್ಥಗಿತದ ಬಗ್ಗೆ ಟ್ರ್ಯಾಕ್ ಮಾಡುತ್ತದೆ.
ಯುನೈಟೆಡ್ ಕಿಂಗ್‌ಡಮ್, ಮೆಕ್ಸಿಕೋ, ಬ್ರೆಜಿಲ್, ಯುರೋಪ್ ಮತ್ತು ಇಟಲಿ ಸೇರಿದಂತೆ ಇತರ ದೇಶಗಳಲ್ಲಿನ ಬಳಕೆದಾರರು ಟ್ವಿಟರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಸ್ಥಗಿತಕ್ಕೆ ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಫೆಬ್ರವರಿಯಲ್ಲಿ ಸಾವಿರಾರು ಬಳಕೆದಾರರಿಗೆ ಸೇವೆಗಳನ್ನು ಅಡ್ಡಿಪಡಿಸಿದ ಇದೇ ರೀತಿಯ ಸ್ಥಗಿತ ಉಂಟಾಗಿತ್ತು. ನಂತರ, ಮೈಕ್ರೋಬ್ಲಾಗಿಂಗ್ ವೆಬ್ ಸೈಟ್ ಸ್ಥಗಿತಕ್ಕೆ ಕಾರಣವಾದ ಸಾಫ್ಟ್ ವೇರ್ ದೋಷವನ್ನು ಟ್ವಿಟರ್ ಸರಿಪಡಿಸಿದೆ ಎಂದು ಹೇಳಲಾಗಿತ್ತು.
ಟ್ವಿಟರ್ ಖರೀದಿಸಲು 44 ಬಿಲಿಯನ್ ಡಾಲರ್ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮೊಕದ್ದಮೆ ಹೂಡಿದ ನಂತರ ಮತ್ತು ಪ್ರತಿ ಟ್ವಿಟರ್ ಷೇರಿಗೆ ಒಪ್ಪಿದ 54.20 ಡಾಲರ್ ಗೆ ವಿಲೀನ ಪೂರ್ಣಗೊಳಿಸಲು ಆದೇಶ ನೀಡುವಂತೆ ಡೆಲವೇರ್ ನ್ಯಾಯಾಲಯವನ್ನು ಕೇಳಿಕೊಂಡ ನಂತರ ಈ ಸ್ಥಗಿತ ಉಂಟಾಗಿದೆ.